ಪ್ರಮುಖ ಸುದ್ದಿ
ಕಲಾಸಕ್ತರಿಗೆ ಸಂತಸದ ಸುದ್ದಿ ನೀಡಿದ ಮಂಡ್ಯ ರಮೇಶ!
ಮೈಸೂರು : ಪ್ರತಿಷ್ಠಿತ ಮೈಸೂರು ವಿಶ್ವ ವಿದ್ಯಾಲಯವು ಕಲಾವಿದ ಮಂಡ್ಯ ರಮೇಶ ನೇತೃತ್ವದ ‘ನಟನ ರಂಗಶಾಲೆ’ಗೆ ಡಿಪ್ಲೊಮಾ ಪದವಿಯ ಮಾನ್ಯತೆ ನೀಡಿದೆ. ಈ ಬಗ್ಗೆ ಕಲಾವಿದ ಮಂಡ್ಯ ರಮೇಶ ಸಾಮಾಜಿಕ ಜಾಲತಾಣದಲ್ಲಿ ಅಧಿಕೃತ ಮಾಹಿತಿ ಶೇರ್ ಮಾಡಿದ್ದು ಖುಷಿ ವ್ಯಕ್ತಪಡಿಸಿದ್ದಾರೆ.
ಡಿಪ್ಲೊಮಾ ಇನ್ ಥೇಟರ್ ಆರ್ಟ್ಸ್ ಒಂದು ವರ್ಷದ ಅವಧಿಯ ಕಲಿಕೆಯ ಕೋರ್ಸಿಗೆ ಮೈಸೂರು ವಿಶ್ವ ವಿದ್ಯಾಲಯ ಪದವಿ ನೀಡಲಿದೆ. ರಂಗಶಾಲೆಯ ಶಿಕ್ಷಕ ವೃಂದ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಅಪಾರ ಸಂತಸ ಉಂಟಾಗಿದೆ ಎಂದು ಮಂಡ್ಯ ರಮೇಶ್ ತಿಳಿಸಿದ್ದಾರೆ.