ಕೋವಿಡ್-19 ಛಾಯಾಚಿತ್ರ ಪ್ರದರ್ಶನದಲ್ಲಿ ಶಹಾಪುರಿನ ಕೋವಿಡ್ ಸಾಂದರ್ಭಿಕ ಚಿತ್ರಗಳು
ಕೋವಿಡ್-19 ಛಾಯಾಚಿತ್ರ ಪ್ರದರ್ಶನದಲ್ಲಿ ಶಹಾಪುರಿನ ಕೋವಿಡ್ ಸಾಂದರ್ಭಿಕ ಚಿತ್ರಗಳು
ಬೆಂಗಳೂರಃ ಕರ್ನಾಟಕ ರಾಜ್ಯ ಪತ್ರಿಕಾ ಛಾಯಾಗ್ರಾಹಕ ಸಂಘದಿಂದ ಇಲ್ಲಿನ ಚಿತ್ರಕಲಾ ಪರಿಷತ್ ನಲ್ಲಿ ಆಯೋಜಿಸಿದ್ದ ಕೋವಿಡ್-19 ಛಾಯಾಚಿತ್ರ ಪ್ರದರ್ಶನ 2020 ಕಾರ್ಯಕ್ರಮವನ್ನು ಸಿಎಂ ಯಡಿಯೂರಪ್ಪ ಉದ್ಘಾಟಿಸಿದರು.

ಪ್ರದರ್ಶನದಲ್ಲಿ ರಾಜ್ಯದ ಹಲವು ಪ್ರದೇಶದ ಕೋವಿಡ್ ಲಾಕ್ ಡೌನ್ ಸಂದರ್ಭದ ವಿವಿಧ ಆಯ್ದ ಉತ್ತಮ ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದು, ವಿಶೇಷವಾಗಿ ಅದರಲ್ಲಿ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಾಂದರ್ಭಿಕ ಚಿತ್ರಗಳನ್ನು ಸಹ ಪ್ರದರ್ಶನಕ್ಕೆ ಇಡಲಾಗಿದೆ.
ಸಗರನಾಡಿನ ಉತ್ತಮ ಛಾಯಾಗ್ರಾಹಕರಾದ ಶಹಾಪುರ ತಾಲೂಕಿನ ಸಗರ ಗ್ರಾಮ ನಿವಾಸಿ ಮಂಜುನಾಥ ಬಿರೆದಾರ ಅವರು ತೆಗೆದ ಆಯ್ದ ಚಿತ್ರಗಳು ಈ ಪ್ರದರ್ಶನದಲ್ಲಿ ಇಡಲಾಗಿದೆ.
ಬಿರೆದಾರ ತೆಗೆದ ಚಿತ್ರಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ಸ್ವತಃ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಂಜುನಾಥ ಬಿರೆದಾರ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಎಸ್.ಈಶ್ವರ್ ಹಾಗೂ ಶರಣಬಸವರಾಜ, ಸತೀಶ ಮುರಾಳ ಸೇರಿದಂತೆ ಛಾಯಾಗ್ರಾಹಕ ಸಂಘದ ವಿವಿಧ ಪದಾಧಿಕಾರಿಗಳು ಮತ್ತು ಪತ್ರಿಕಾ ಛಾಯಾಚಿತ್ರಗಾರರು ಭಾಗವಹಿಸಿದ್ದರು.