ಮಣ್ಣೂರ ಆಸ್ಪತ್ರೆಯ ಕಾರ್ಯಕ್ಕೆ ಶ್ರೀರಾಮುಲು ಶ್ಲಾಘನೆ
ಕೊರೊನಾ ಸಂದರ್ಭ ಮಣ್ಣೂರ ಆಸ್ಪತ್ರೆ ನೀಡಿದ ಸೇವೆ ಮೆಚ್ಚುಗೆ
ಮಣ್ಣೂರ ಆಸ್ಪತ್ರೆಯ ಕಾರ್ಯಕ್ಕೆ ಶ್ರೀರಾಮುಲು ಶ್ಲಾಘನೆ
ಕೊರೊನಾ ಸಂದರ್ಭ ಮಣ್ಣೂರ ಆಸ್ಪತ್ರೆ ನೀಡಿದ ಸೇವೆ ಮೆಚ್ಚುಗೆ
ಕಲ್ಬುರ್ಗಿಃ ನಗರದಲ್ಲಿರುವ ಮಣ್ಣೂರ ಆಸ್ಪತ್ರೆ ಕೊರೊನಾ ಸಂದರ್ಭದ ಕಠಿಣ ಪರಿಸ್ಥಿತಿಯಲ್ಲೂ ಸಾರ್ವಜನಿಕರಿಗೆ ಅಪಾರ ಸೇವೆ ಸಲ್ಲಿಸಿರುವದು ಶ್ಲಾಘನಿಯ ಎಂದು ಸಾರಿಗೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಬಳ್ಳಾರಿ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ತಿಳಿಸಿದರು.
ಕಲ್ಬುರ್ಗಿ ಜಿಲ್ಲಾ ಪ್ರವಾಸದಲ್ಲಿರುವ ಅವರು, ನಗರದ ಪ್ರತಿಷ್ಠಿತ ಮಣ್ಣೂರ ಆಸ್ಪತ್ರೆಗೆ ಭೇಟಿ ನೀಡಿ ಸಾರ್ವಜನಿಕರಿಗೆ ನೀಡುತ್ತಿರುವ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತ ಮಂಡಳಿ ವತಿಯಿಂದ ಸನ್ಮಾನ ಸ್ವೀಕರಿಸಿದ ಅವರು, ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಎಂಬ ಗಾದೆಯಂತೆ ಡಾ.ಫಾರುಕ್ ಮಣ್ಣೂರ ಅವರು ತಮ್ಮ 34 ನೇ ವಯಸ್ಸಿನಲ್ಲಿಯೇ ಕಲಬುರಗಿ ನಗರ ಅಷ್ಟೆ ಅಲ್ಲ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಉತ್ತಮ ಸೇವೆ ಸಲ್ಲಿಸಲು ಸಕಲ ಸೌಲಭ್ಯ ವ್ಯವಸ್ಥೆ ಮಾಡಿದ್ದು, ಸಮರ್ಪಕ ಸೇವೆ ಒದಗಿಸಿದ್ದಾರೆ.
ಕೊರೊನಾ ಸಂದರ್ಭದಲ್ಲಂತೂ ಕಲಬುರಗಿ ಜನತೆಯ ಪಾಲಿಗೆ ವರದಾನವಾದಂತೆ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ 40 ಬೆಡ್‌ಗಳುಳ್ಳ ಏಕೈಕ ಆಸ್ಪತ್ರೆಯೆಂಬ ಹೆಗ್ಗಳಿಕೆಗೆ ಪಾತ್ರವೂ ಆಗಿದೆ. ಜಿಲ್ಲೆಯಲ್ಲಿ ಬಿಸಿಲು ಹೆಚ್ಚಾಗಿರುವುದರಿಂದ ತಾಲೂಕುಗಳಲ್ಲಿ ಶುದ್ಧ ಕುಡಿಯುವ ನೀರಿನ ಅರವಟಿಕೆಗಳ ಸ್ಥಾಪನೆ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಬಿಸಿಲು ಹಾಗೂ ಮಳೆಯಿಂದ ರಕ್ಷಣೆಗೆ ಸೂಕ್ತ ಛತ್ರಿ ವಿತರಣೆ ಮಾಡಿದ್ದಾರೆ.
ಚಿಕಿತ್ಸೆಗಾಗಿ ಬೇರೆ ರಾಜ್ಯಕ್ಕೆ ಹೋಗುತ್ತಿದ್ದ ಕಲಬುರಗಿ ಜನತೆಗೆ ಮಣೂರ ಆಸ್ಪತ್ರೆ ದೇವರಂತೆ ಕೈ ಹಿಡಿದಿದೆ. ಆಸ್ಪತ್ರೆ ಪ್ರಾರಂಭವಾದ 1 ವರ್ಷದಲ್ಲಿ 1000ಕ್ಕೂ ಹೆಚ್ಚು ಮೇಜರ್ ಸರ್ಜರಿ ಆಪರೇಷನ್ ಹಾಗೂ ಎಮರಜೆನ್ಸಿ ಟ್ರೋಮಾ ಚಿಕಿತ್ಸೆ, ಮೆಟ್ರೋ ಸಿಟಿಯಲ್ಲಿ ಸಿಗುವಂತಹ ಚಿಕಿತ್ಸೆ ಕಲಬುರಗಿ ನಗರದಲ್ಲಿ ನೀಡುತ್ತಿರುವ ಮಣ್ಣೂರ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಶ್ರಮ ಮೆಚ್ಚುವಂತದ್ದು ಎಂದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ವ್ಯವಸ್ಥಾಪಕ ಹಾಗೂ ನಿರ್ದೇಶಕ ಡಾ.ಫಾರುಕ್ ಮಣೂರ, ಮಾಜಿ ಶಾಸಕ ದೊಡ್ಡಪ್ಪ ಗೌಡ ಪಾಟೀಲ, ರಾಕೇಶ ವಾಡೆಕರ್, ಡಾ.ಅನೀಲ ಎಸ್‌ಕೆ, ಲಕ್ಷ್ಮೀಕಾಂತ, ಡಾ.ವಿವೇಕ ವೀರೇಶ, ಡಾ. ಸಾಗರ ಕೆ, ಡಾ.ರಾಜ್ ಅಹಮದ್ ಮುಲ್ಲಾ, ಡಾ. ಮುಶ್ತಾಕ್ ಸೌದಾಗರ, ಮಹ್ಮದ ಇಸ್ಮಾಯಿಲ್ ಡಾ.ವಿಠ್ಠಲ್, ಡಾ. ರೇಣುಕಾ, ಡಾ. ಮುಜಾಮಿಲ್,ಡಾ. ಮತೀನ್ ಅಲಿ, ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.