ಪ್ರಮುಖ ಸುದ್ದಿ
ಮಂತ್ರಾಲಯದ ಸುಬುದೇಂದ್ರ ತೀರ್ಥರ ಕಾರ್ಯದರ್ಶಿ ಕೋವಿಡ್ಗೆ ಬಲಿ
ಮಂತ್ರಾಲಯದ ಸುಬುದೇಂದ್ರ ತೀರ್ಥರ ಕಾರ್ಯದರ್ಶಿ ಕೋವಿಡ್ಗೆ ಬಲಿ
ರಾಯಚೂರಃ ಸುಕ್ಷೇತ್ರ ಮಂತ್ರಾಲಾಯದ ಪೀಠಾಧಿಪತಿ ಸುಬುದೇಂದ್ರ ತೀರ್ಥ ಸ್ವಾಮೀಜಿಗಳ ಆಪ್ತ ಕಾರ್ಯದರ್ಶಿಯಾಗಿದ್ದ ಸುಯಮೀಂದ್ರ ಆಚಾರ್ಯ ಕೋವಿಡ್ ಗೆ ಬಲಿಯಾದ ಘಟನೆ ನಡೆದಿದೆ.
ಸುಯಮೀಂದ್ರ ಆಚಾರ್ಯ ಅವರು ಇದೇ ಮಠದ ಯತಿಗಳಾಗಿದ್ದ ಸುಶಮೀಂದ್ರ ತೀರ್ಥರ ಪೂರ್ವಾಶ್ರಮದ ಪುತ್ರರಾಗಿದ್ದಾರೆ.
ದೆಹಲಿಯ ಆಸ್ಪತ್ರೆಯೊಂದರಲ್ಲಿ ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ. ಇವರ ಅಗಲಿಕೆಗೆ ನೂರಾರು ಜನ ಗಣ್ಯರು, ಸ್ವಾಮೀಜಿಗಳು ಭಕ್ತರು ಕಂಬನಿ ಮಿಡಿದಿದ್ದಾರೆ.