ಪ್ರಮುಖ ಸುದ್ದಿ
ಮರಾಠಿಗರ ಅಭಿವೃದ್ಧಿಗೆ ಪ್ರಾಧಿಕಾರ ರಚನೆ – ಜಗಧೀಶ ಶೆಟ್ಟರ್
ಮರಾಠಿಗರ ಅಭಿವೃದ್ಧಿಗೆ ಪ್ರಾಧಿಕಾರ ರಚನೆ – ಜಗಧೀಶ ಶೆಟ್ಟರ್
ಬೆಳಗಾವಿಃ ಮರಾಠ ಭಾಷೆಗೂ ಪ್ರಾಧಿಕಾರಕ್ಕೂ ಸಂಬಂಧವಿಲ್ಲ ಮರಾಠಿಗರ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ ಮಾಡಲಾಗಿದೆ ಎಂದು ಸಿಎಂ ಅವರು ಟ್ವಿಟರ್ ಮೂಲಕ ಸ್ಪಷ್ಟತೆ ನೀಡಿದ್ದಾರೆ.
ಇದನ್ನೆ ಮಾಜಿ ಸಿಎಂ ಜಗಧೀಶ ಶೆಟ್ಟರ್ ಮಾಧ್ಯಕ್ಕೆ ಹೇಳಿಕೆ ನೀಡಿದ್ದು, ಮರಾಠ ಭಾಷೆಗೂ ಪ್ರಾಧಿಕಾರಕ್ಕೂ ಯಾವುದೇ ಸಂಬಂಧ ಇಲ್ಲ. ತಲತಲಾಂತರದಿಂದ ಮರಾಠರು ಇಲ್ಲಿ ವಾಸವಿದ್ದು, ಮರಾಠ ಸಮುದಾಯದ ಅಭಿವೃದ್ಧಿಗೆ ಪ್ರಾಧಿಕಾರ ರಚನೆ ಮಾಡಿದ್ದು,
ನಮ್ಮ ಪಕ್ಷ ಮತ್ತು ಸರ್ಕಾರ ಪ್ರತಿ ಸಮುದಾಯದ ಏಳ್ಗೆ ಬಯಸಿದ್ದು ಆಯಾ ಜನಾಂಗದ ಬೆಳವಣಿಗೆಗೆ ಸಹಾಯ ಸಹಕಾರದ ಕಾರ್ಯಗಳನ್ನು ಕೈಗೆತ್ತಿಕೊಳ್ಳುವದು ನಮ್ಮ ಕರ್ತವ್ಯ. ಸರ್ಕಾರದ ಕೆಲಸ ಹೀಗಾಗಿ ಮರಾಠಿಗರ ಅಭಿವೃದ್ಧಿಗೆ ಸರ್ಕಾರ ಸೂಕ್ತ ನಿರ್ಣಯ ಕೈಗೊಂಡಿದೆ ಎಂದು ಶೆಟ್ಟರ್ ಪ್ರತಿಪಾದಿಸಿದ್ದಾರೆ.