ಪ್ರಮುಖ ಸುದ್ದಿ
ತರಕಾರಿ ಮಾರಾಟ ಮೂರು ಭಾಗಗಳಾಗಿ ವಿಂಗಡಣೆಃ ತಹಸೀಲ್ದಾರ
ಶಹಾಪುರಃ ನಗರದ ಸುಪರ್ ಮಾರ್ಕೇಟ್‍ನಲ್ಲಿ ಜನ ಜಂಗುಳಿ ಸೇರುತ್ತಿರುವ ಹಿನ್ನೆಲೆ ತಾಲೂಕು ಆಡಳಿತ ಜನ ಜಂಗುಳಿ ನಿಯಂತ್ರಣಕ್ಕೆ ನಗರದ ಮೂರು ಭಾಗಗಳಲ್ಲಿ ತರಕಾರಿ ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಹಸೀಲ್ದಾರ ಜಗನ್ನಾಥರಡ್ಡಿ ತಿಳಿಸಿದ್ದಾರೆ.
ನಗರದ ಸಿಪಿಎಸ್ ಶಾಲಾ ಮೈದಾನ, ಯಾದಗಿರಿ ರಸ್ತೆಯ ಗಂಜ್ ಪ್ರದೇಶ ಮತ್ತು ಡಿಗ್ರಿ ಕಾಲೇಜು ಮೈದಾನದಲ್ಲಿ ತರಕಾರಿ ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಬುಧವಾರದಿಂದ ಈ ಮೂರು ಪ್ರದೇಶದಲ್ಲಿ ಮಾತ್ರ ತರಕಾರಿ ದೊರೆಯಲಿದ್ದು, ಸಾರ್ವಜನಿಕರು ಅಗತ್ಯವಿದ್ದಲ್ಲಿ ಮಾತ್ರ ಮನೆಯಿಂದ ಒಬ್ಬರು ಮಾತ್ರ ತರಕಾರಿ ತರಲು ತೆರಳಬೇಕು. ಕೊರೊನಾ ವೈರಸ್ ದಿನೇ ದಿನೇ ಅಟ್ಟಹಾಸ ಮೆರೆಯುತ್ತಿದ್ದು, ದಯವಿಟ್ಟು ನಾಗರಿಕರು ಅರಿತು ನಡೆಯಬೇಕು. ಆನರ ಒಳಿತಿಗಾಗಿ ಉಳಿವಿಗಾಗಿ ಸರ್ಕಾರಿ ನಿಯಮಗಳನ್ನು ಎಲ್ಲರೂ ಪಾಲಿಸಬೇಕು ಎಂದು ಅವರು ತಿಳಿಸಿದ್ದಾರೆ.