ಪ್ರಮುಖ ಸುದ್ದಿ

ಮದ್ವೆ ಮನೆಯಿಂದ ಅಕ್ಕ ಎಸ್ಕೇಪ್, ತಂಗಿ ಜೊತೆ ಮುಹೂರ್ತ ಫಿಕ್ಸ್!?

ಕೋಲಾರ: ಆ ಕುಟುಂಬದವರು ಅಂದುಕೊಂಡಂತೆ ಆಗಿದ್ದರೆ ಇಂದು ಮಾಲೂರು ಪಟ್ಟಣದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಗುರೇಶ ಜೊತೆ ಸೌಮ್ಯ ವಿವಾಹ ನಡೆಯಬೇಕಿತ್ತು. ಆದರೆ, ಆರತಕ್ಷತೆಗೂ ಮುನ್ನವೇ ನವವಧು ನಾಪತ್ತೆ ಆಗಿದ್ದಾಳೆ. ಪರಿಣಾಮ ಮದುವೆ ಮನೆಯಲ್ಲಿ ತೀವ್ರ ಗೊಂದಲ ಸೃಷ್ಟಿಯಾಗಿದೆ. ಮದುವೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿರುವ ವೇಳೆ ವಧು ನಾಪತ್ತೆಯಾಗಿದ್ದು ಎರಡೂ ಕಡೆಯ ಕುಟುಂಬಗಳಿಗೆ ತಲೆಬಿಸಿ ಮಾಡಿದೆ.

ಮದುವೆ ಮಂಟಪ ಸಿಂಗಾರಗೊಂಡಿದೆ. ಬಂದು ಬಾಂಧವರೂ ಬಂದಾಗಿದೆ. ಸಿಹಿ ತಿನಿಸುಗಳೂ ರೆಡಿಯಾಗಿದ್ದು ತಾಳಿ ಕಟ್ಟುವುದು ಮಾತ್ರ ಬಾಕಿಯಿರುವಾಗ ವಧು ಎಸ್ಕೇಪ್ ಆಗಿರುವ ಸುದ್ದಿ ಎರಡೂ ಕುಟುಂಬಗಳಿಗೆ ಬರಸಿಡಿಲಿನಂತಾಗಿದೆ. ಹೀಗಾಗಿ, ಸಂಬಂಧದಲ್ಲಿ ವಧುವಿಗೆ ತಂಗಿ ಆಗಲಿರುವ ಮತ್ತೋರ್ವ ಯುವತಿ ಜೊತೆ ಗುರೇಶ ವಿವಾಹ ನೆರವೇರಿಸಲು ಎರಡೂ ಕುಟುಂಬದ ಹಿರಿಯರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

Related Articles

Leave a Reply

Your email address will not be published. Required fields are marked *

Back to top button