ಹುತಾತ್ಮ ಯೋಧರ ಸ್ಮಾರಕ ಅಭಿವೃದ್ಧಿಗೆ ದರ್ಶನಾಪುರ ಭರವಸೆ
ಸಗರ ಹುತಾತ್ಮ ಯೋಧರ ಸ್ಮಾರಕ ಅಭಿವೃದ್ಧಿಗೆ 5 ಲಕ್ಷ
ಯಾದಗಿರಿ, ಶಹಾಪುರಃ ತಾಲೂಕಿನ ಸಗರ ಗ್ರಾಮದಲ್ಲಿರುವ ಹುತಾತ್ಮ ಯೋಧರ ಸ್ಮಾರಕ ಅಭಿವೃದ್ಧಿಗೆ 5 ಲಕ್ಷ ರೂ.ಅನುದಾನ ಕಲ್ಪಿಸುವದಾಗಿ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಸಗರ ಯೋಧರ ಬಳಗಕ್ಕೆ ಭರವಸೆ ನೀಡಿದರು.
ಶನಿವಾರ ಶಾಸಕರ ಕಾರ್ಯಾಲಯಕ್ಕೆ ತೆರಳಿದ್ದ ಸಗರ ಗ್ರಾಮದ ಯೋಧರು ನೂತನ ಶಾಸಕರನ್ನು ಸನ್ಮಾನಿಸಿ, ತಮ್ಮ ಬೇಡಿಕೆಯನ್ನು ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಹುತಾತ್ಮ ಯೋಧರ ಸ್ಮಾರಕ ಅಭಿವೃದ್ಧಿಗೆ ಕೂಡಲೇ ಅನುದಾನ ಕಲ್ಪಿಸಿ ಕೊಳವೆ ಬಾವಿ ಮತ್ತು ಕಂಪೌಂಡ್ ನಿರ್ಮಾಣ ಸೇರಿದಂತೆ ಉದ್ಯಾನವನ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಮತ್ತು ಹುತಾತ್ಮ ಯೋಧ ಸುಭಾಷಚಂದ್ರ ಮಡಿವಾಳ ಕುಟಂಬಕ್ಕೆ 4 ಎಕರೆ ಜಮೀನು ಒದಗಿಸುವ ಕುರಿತು ತಹಸೀಲ್ದಾರರಿಗೆ ಸ್ಥಳದಲ್ಲಿಯೇ ಫೋನ್ ಮೂಲಕ ಮಾತನಾಡಿ ಕೂಡಲೇ ಜಮೀನು ಒದಗಿಸುವ ಕುರಿತು ಸೂಚಿಸಿದರು.
ಅಲ್ಲದೆ ಸಗರ ಗ್ರಾಮದಿಂದ ಸುಮಾರು 10ರಿಂದ 12 ಜನರು ಯೋಧರಾಗಿ ದೇಶ ಕಾಯುವ ಕೆಲಸದಲ್ಲಿ ತೊಡಗಿರುವ ವಿಷಯ ತಿಳಿದು ಸಂತಸ ವ್ಯಕ್ತಪಡಿಸಿದರ ಶಾಸಕರು, ಯೋಧರಿಂದ ಸನ್ಮಾನಿಸಿಕೊಂಡಿರುವುದು ವಿಶೇಷ ಶಕ್ತಿ ಬಂದಿದೆ. ತಮ್ಮ ಬೇಡಿಕೆಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವೆ. ನಿಮ್ಮ ಮನೆಯ ಕುಟುಂಬ ಸದಸ್ಯರಲ್ಲಿ ನಾನು ಒಬ್ಬರಂತೆ ಭಾವಿಸಿ ಯಾರು ಅನ್ಯತಾ ಭಾವಿಸಬೇಡಿ.
ಯೋಧರ ಕುಟುಂಬದಲ್ಲಿ ಯಾವುದೇ ಸಮಸ್ಯೆ ಕಂಡು ಬಂದಲ್ಲಿ ತಕ್ಷಣ ನೇರವಾಗಿ ಬಂದು ಕಾಣಲು ನಿಮ್ಮ ಕುಟುಂಬಸ್ಥರಿಗೆ ತಿಳಿಸಿ ಎಂದು ಯೋಧರಿಗೆ ಕಾಳಜೀಪೂರ್ವಕವಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಗರ ಯೋಧರಾದ ದುರ್ಗಪ್ಪ, ಅಮರೇಶ, ದೇವಿಂದ್ರ ಮರ್ಸ, ಮಲ್ಲಿನಾಥ ಸೇರಿದಂತೆ ಪತ್ರಕರ್ತ ಮಂಜುನಾಥ ಬಿರೆದಾರ ಇದ್ದರು. ನೂತನ ಶಾಸಕರನ್ನು ಯೋಧರು ಸನ್ಮಾನಿಸಿ ಗೌರವಿಸಿದರು.