ಪ್ರಮುಖ ಸುದ್ದಿ
ಆ.30 ರಂದು ಹುತಾತ್ಮ ಯೋಧ ಸುಭಾಷಚಂದ್ರ ಮಡಿವಾಳ ಸ್ಮಾರಕ ಉದ್ಘಾಟನೆ
ಹುತಾತ್ಮ ಯೋಧ ಸುಭಾಷಚಂದ್ರ ಮಡಿವಾಳ ಸ್ಮಾರಕ ಉದ್ಘಾಟನೆ
ಯಾದಗಿರಿ, ಶಹಾಪುರಃ ತಾಲೂಕಿನ ಸಗರ ಗ್ರಾಮದ ಸರ್ಕಾರಿ ಪ್ರೌಡ ಶಾಲೆಯ ಆವರಣದಲ್ಲಿ ಗ್ರಾಮದ ಹುತಾತ್ಮ ಯೋಧ ಸುಭಾಷಚಂದ್ರ ಮಡಿವಾಳ ಅವರ ನೆನಪಿಗಾಗಿ ಕೇಂದ್ರ ಸರ್ಕಾರದ ಕಮಾಂಡೋ ಸೆಂಟ್ರಲ್ ಇಚಿಡಿಸ್ಟ್ರೀಯಲ್ ಸೆಕ್ಯೂರಿಟಿ ಫೋರ್ಸ್ ಆಲ್ ರ್ಯಾಂಕ್ ಆಫ್ ಸಿಐಎಸ್‍ಎಫ್ ಯುನಿಟ್, ಎಸ್‍ಎಸ್‍ಟಿಪಿಪಿ ಸೋಲಾಪುರ ಇವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಸೂಚನೆ ಮೇರೆಗೆ ನಿರ್ಮಾಣಗೊಂಡ ಹುತಾತ್ಮ ಯೋಧ ಸ್ಮಾರಕವನ್ನು ಗುರುವಾರ ಬೆಳಗ್ಗೆ 11 ಗಂಟೆಗೆ ಉದ್ಘಾಟನೆ ನಡೆಯಲಿದೆ.
ಕಾರಣ ದೇಶ ಪ್ರೇಮಿಗಳು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಕಾರ್ಯಕ್ರಮಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಯಾದಗಿರಿ ಸೇರಿದಂತೆ ಜಿಲ್ಲಾಧಿಕಾರಿ ಮತತು ಇತರೆ ಅಧಿಕಾರಿಗಳು ಆಗಮಿಸಿಲಿದ್ದಾರೆ ಎಂದು ಯೋಧ ಸ್ಮಾರಕ ನಿರ್ಮಾಣ ಜವಬ್ದಾರಿ ಹೊತ್ತ ಸೋಲಾಪುರದ ಯೋಧ ಟಿ.ವಿಶ್ವನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಲ್ಲದೆ ಇದೇ ಗ್ರಾಮದ ಯೋಧರಾದ ಮಲ್ಲಿಕಾರ್ಜುನ ಮರ್ಸ, ದೇವಿಂದ್ರ ಮರ್ಸ ಉಪಸ್ಥಿತರಿರಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.