ಯಾದಗಿರಿ: ಮಹಿಳೆ ಮೇಲೆ ಅಮಾನುಷ ಕೃತ್ಯವೆಸಗಿದ ದುಷ್ಟರು!
ಯಾದಗಿರಿ: ಯಾದಗಿರಿ ತಾಲೂಕಿನ ಗ್ರಾಮವೊಂದರ ಮಹಿಳೆಯನ್ನು ಕೋಹಿಲೂರು ಗ್ರಾಮದ ದೇವಪ್ಪ ಪರಿಚಯ ಮಾಡಿಕೊಂಡಿದ್ದಾನೆ. ಬಳಿಕ ಸಲುಗೆ ಬೆಳೆಸಿಕೊಂಡು
ಮದುವೆ ಆಗುವುದಾಗಿ ನಂಬಿಸಿದ್ದನಂತೆ.
ಆದರೆ, ದೇವಪ್ಪನ ಮನೆಯಲ್ಲಿ ಮಾತ್ರ ಮದುವೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತಂತೆ. ಹೀಗಾಗಿ, ಮಹಿಳೆಯನ್ನು ಬೆಂಗಳೂರಿಗೆ ಕರೆದೊಯ್ದಿರುವ ದೇವಪ್ಪ ಕಳೆದ ಮಂಗಳವಾರ ಕಂಟೌನ್ ಮೆಂಟ್ ರೈಲ್ವೆ ನಿಲ್ದಾಣದ ಸಮೀಪ ಅತ್ಯಾಚಾರವೆಸಗಿದ್ದಾನೆ. ಅಲ್ಲದೆ ಕಬ್ಬಿಣದ ರಾಡಿನಿಂದ ಗುಪ್ತಾಂಗಕ್ಕೆ ಇರಿದು ನೀಚ ಕೃತ್ಯವನ್ನು ಎಸಗಿದ್ದಾನೆ ಎನ್ನಲಾಗಿದೆ.
ದೇವಪ್ಪನ ವಿಕೃತಿಗೆ ಸಂಬಂಧಿ ಮರೆಪ್ಪ ಸಹ ಜೊತೆಯಾಗಿದ್ದನೆಂಬ ಆರೋಪ ಕೇಳಿ ಬಂದಿದೆ. ಬಳಿಕ ಸಂತ್ರಸ್ತ ಮಹಿಳೆಯನ್ನು ಮರಳಿ ಯಾದಗಿರಿಗೆ ಕರೆತಂದಿದ್ದಾರೆನ್ನಲಾಗಿದೆ. ಈ ಬಗ್ಗೆ ಯಾದಗಿರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸದ್ಯ ಸಂತ್ರಸ್ಥೆ ಮಹಿಳೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಪ್ರಕರಣ ದಾಖಲಿಸಿಕೊಂಡಿರುವ ಯಾದಗಿರಿ ನಗರಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳ ಶೋಧಕ್ಕೆ ಜಾಲ ಬೀಸಿದ್ದಾರೆ.
ಪೊಲೀಸರು ಆದಷ್ಟು ಬೇಗ ನೀಚ ಕೃತ್ಯವೆಸಗಿರುವ ರಾಕ್ಷಸರನ್ನು ಬಂಧಿಸಿ ತಕ್ಕ ಶಾಸ್ತಿ ಮಾಡಬೇಕಿದೆ. ಆ ಮೂಲಕ ಮಹಿಳಾ ದೌರ್ಜನ್ಯವೆಸಗುವ ದುರುಳರಿಗೆ ಉಳಿಗಾಲವಿಲ್ಲ ಎಂಬ ಸಂದೇಶ ರವಾನಿಸಬೇಕಿದೆ.