ಮತ್ಸ್ಯದರ್ಶಿನಿ ಹೊಟೇಲ್ ಆರಂಭ- ಸಚಿವ ಕೋಟ ಶ್ರೀನಿವಾಸ
ಬೆಂಗಳೂರಃ ರಾಜ್ಯದಾದ್ಯಂತ ಪ್ರತಿ ಜಿಲ್ಲೆಗೊಂದರಂತೆ ಮತ್ಸ್ಯ ದರ್ಶಿನಿ ಹೊಟೆಲ್ ಆರಂಭಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪುಜಾರಿ ತಿಳಿಸಿದ್ದಾರೆ.
ಮೊದಲು ಜಿಲ್ಲೆಗೊಂದರಂತೆ ಮೀನು ಭೋಜನ ಸವಿಯಲು ಹೊಟೆಲ್ ಆರಂಭ ಮಾಡಲು ಉದ್ದೇಶಿಸಿದ್ದ ಮೀನುಗಾರಿಕೆ ಸಚಿವರು, ಕಡಿಮೆ ದರದಲ್ಲಿ ಜನರಿಗೆ ಉತ್ತಮ ಮೀನಿನೂಟ ನೀಡುವ ಯೋಜನೆ ರೂಪಿಸಲು ಮುಂದಾಗಿದ್ದಾರೆ.
ಬಡ, ಮಧ್ಯಮ ವರ್ಗಕ್ಕೆ ಅನುಕೂಲವಾಗುವ ಮೀನಿನೂಟ ಸೌಲಭ್ಯ ಕಲ್ಪಿಸುವ ಯೋಜನೆ ಇದಾಗಿದೆ ಎಂದ ಅವರು, ಈ ಬಾರಿ ಬಜೆಟ್ ನಲ್ಲಿ ಮುಖ್ಯಮಂತ್ರಿ ಘೋಷಣೆ ಮಾಡಲಿದ್ದಾರೆ.
ಕನಿಷ್ಠ 100 ರೂ.ಗೆ ಸಮರ್ಪಕ ಎಲ್ಲಾ ರೀತಿಯ ಮೀನಿನ ಊಟ ನೀಡುವ ಯೋಜನೆ ಇದಾಗಿದೆ. ಮುಖ್ಯವಾಗಿ ಸಾಮಾನ್ಯ ಹೊಟೆಲ್ ಗಿಂತ ಕಡಿಮೆ ದರದಲ್ಲಿ ದೊರೆಯುವ ವ್ಯವಸ್ಥೆ ಕೈಗೊಳ್ಳಲಾಗುವುದು.
ಈಗಾಗಲೇ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ಸಚಿವರು, ಸ್ಥಳವಕಾಶ ಮತ್ತು ಆರ್ಥಿಕತೆ ಕುರಿತು ಯೋಜನಾ ವರದಿ ಸಿದ್ಧಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದಿಂದ ಮತ್ಸ್ಯ ದರ್ಶಿನಿ ಹೊಟೆಲ್ಗೆ ಚಾಲನೆ ನೀಡಲು ಆರಂಭಿಕವಾಗಿ ಜಿಲ್ಲೆಗೊಂದರಂತೆ ತೆರಯಲಾಗುವದು ನಂತರ ತಾಲೂಕಿಗೂ ವಿಸ್ತರಿಸಲಾಗುವದು ಎಂದು ವಿವರಿಸಿದ ಅವರು,
ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲಾಗಿದ್ದು, ಅಲ್ಲದೆ ಈ ಕುರಿತ ಪ್ರಸ್ತಾವನೆಯನ್ನು ತಯಾರಿಸಿ ಮೀನುಗಾರಿಕೆ ಇಲಾಖೆಯ ಆರ್ಥಿಕ ಇಲಾಖೆಗೂ ರವಾನಿಸಲಾಗಿದೆ. ಅದು ಒಪ್ಪಿಗೆ ಸೂಚಿಸುತ್ತಿದ್ದಂತೆ, ಬಜೆಟ್ ನಲ್ಲಿ ಘೋಷಿಸಿ ಮತ್ಸ್ಯ ದರ್ಶಿನಿ ಹೊಟೆಲ್ ಕಾರ್ಯಾರಂಭ ಮಾಡಲಾಗುವದು ಎಂದು ತಿಳಿದು ಬಂದಿದೆ.