ಪ್ರಮುಖ ಸುದ್ದಿ
ದಾಂಪತ್ಯ ಜೀವನದ ಮೈದಾನಕ್ಕಿಳಿದ ಕ್ರಿಕೆಟಿಗ ಮಯಾಂಕ್ ಅಗರವಾಲ್!
ಬೆಂಗಳೂರು : ಕರ್ನಾಟಕ ಹಾಗೂ ಕಿಂಗ್ಸ್ ಇಲೆವೆನ್ ತಂಡದ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ ಇಂದು ನವ ದಾಂಪತ್ಯಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಗೆಳತಿ ಆಶಿತಾ ಸೂದ್ ಅವರ ಕೈ ಹಿಡಿದಿದ್ದಾರೆ. ಬೆಂಗಳೂರು ನಗರದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಕ್ರಿಕೆಟಿಗ ರಾಹುಲ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡು ಶುಭ ಹಾರೈಸಿದ್ದಾರೆ.
ಕರ್ನಾಟಕದ ಹಿರಿಯ ಪೊಲೀಸ್ ಅಧಿಕಾರಿ ಪ್ರವೀಣ್ ಸೂದ್ ಅವರ ಪುತ್ರಿ ಆಶಿತಾ ಸೂದ್ ಜೊತೆ ಫೆಬ್ರವರಿಯಲ್ಲಿ ಮಯಾಂಕ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮಯಾಂಕ್ ಅಗರ್ವಾಲ್ ಹಾಗೂ ಆಶಿತಾ ಸೂದ್ ಕುಟುಂಬಸ್ಥರು ಫ್ಯಾಮಿಲಿ ಫ್ರೆಂಡ್ಸ್ ಆಗಿದ್ದವರು ಈಗ ಸಂಬಂಧಿಕರಾಗಿದ್ದಾರೆ. ಹೀಗಾಗಿ, ಮಯಾಂಕ್ ಹಾಗೂ ಆಶಿತಾ ಸ್ನೇಹ ಪ್ರೀತಿಯಾಗಿ ಅರಳಿ ಸಪ್ತಪದಿಯನ್ನ ತುಳಿದಿದೆ. ಇವರ ದಾಂಪತ್ಯ ಜೀವನ ಸುಖಮಯವಾಗಿರಲಿ ಎಂದು ಆಶಿಸೋಣ.