ಬಸವಭಕ್ತಿ

‘ಮಜಾ ಟಾಕೀಸ್’ ನಲ್ಲೊಂದು ಅಚ್ಚರಿ ಸಿರೀಸ್!

ದೇವರಿದ್ದಾನಾ ನಿಜವಾಗಿಯೂ ಎಂಬ ಪ್ರಶ್ನೆಗೆ ಸದ್ಗುರು ಜಗದೀಶ ವಾಸುದೇವ ಗುರೂಜಿ ಉತ್ತರ

ನೀವಿದ್ದೀರಾ? ಮಾನವನ ಸಮಸ್ಯೆ ಇದು. ಎಲ್ಲರಿಗೂ ಅಸ್ತಿತ್ವದ ಬಗ್ಗೆ ಅರಿವಿದೆ. ಆದರೆ, ಅವರ ಅಸ್ತಿತ್ವದ ಪ್ರಕೃತಿಯ ಬಗ್ಗೆ ಗೊತ್ತಿಲ್ಲ. ಅಷ್ಟೇಯಾಕೆ, ಅವರಿಗೆ ಸಮಗ್ರ ಅಸ್ತಿತ್ವದ ಪ್ರಕೃತಿಯ ಬಗ್ಗೆಯೂ ಗೊತ್ತಿಲ್ಲ. ಹಾಗಾಗಿ ನಿಮ್ಮ ಮನಸ್ಸಿನಲ್ಲಿ ಪ್ರಶ್ನೆಗಳಿವೆ.

ತಾಯಿಯ ಗರ್ಭದಿಂದ ಹೊರಬಂದ ಹಸುಳೆ ಹೀಗೆ ನೋಡುತ್ತಿರುತ್ತದೆ. ಅದು ಬಾಯಿಬಿಟ್ಟು ಪ್ರಶ್ನೆ ಕೇಳುವುದಿಲ್ಲ. ಆದರೆ, ಆ ಮಗುವಿಗೆ ಕಣ್ಣುಗಳಲ್ಲಿ ಅದು ಏನು, ಇದು ಏನು, ಅದು ಯಾರು, ಇದನ್ನು ಮಾಡಿದವರು ಯಾರು ಎಂಬ ಪ್ರಶ್ನೆಗಳಿರುತ್ತವೆ‌.

ವಾಸ್ತವವಾಗಿ ಅದರ ಯೋಚನೆಗಳಲ್ಲಿ ಅಲ್ಲ, ಅದರ ಮೂಲಭೂತವಾದ ಅನುಭವದಲ್ಲಿ ಅದು ಈ ಅಸ್ತಿತ್ವದ ಪ್ರಕೃತಿ ಏನು. ಇದು ಎಲ್ಲಿಂದ ಬಂತು ಎಂದು ಪ್ರಶ್ನೆಯನ್ನು ಕೇಳುತ್ತಿರುತ್ತದೆ. ಹಾಗಾಗಿ, ಪ್ರಶ್ನೆ ಇರುವುದು ಅಷ್ಟೆಯೇ.

ನೀವು ಬೆಳೆದಾಗ ಆ ಪ್ರಶ್ನೆಯನ್ನು ಬಾಯಿಬಿಟ್ಟು ಕೇಳುತ್ತೀರಿ. ಆದ್ದರಿಂದ ನಿಮಗೆ ನೀವು ಎಲ್ಲಿಂದ ಬಂದಿದ್ದೀರಿ, ಎಲ್ಲಿಗೆ ಹೋಗುತ್ತೀರಿ, ನಿಮ್ಮ ಅಸ್ತಿತ್ವದ ಪ್ರಕೃತಿ ಏನು ಎಂಬುದರ ಬಗ್ಗೆ ಒಂದು ಚೂರೂ ಪ್ರಗ್ನೆಯಿಲ್ಲ. ನೀವು ಈ ಪ್ರಶ್ನೆಯನ್ನು ಕೇಳಿದಾಗ ಮೊದಲು ನಿಮ್ಮ ತಾಯಿಯನ್ನು ನೋಡುವಿರಿ. ಅವರೇ ಇದನ್ನು ಮಾಡಿರಬಹುದು ಅಂದುಕೊಂಡಿದ್ದಿರಿ. ಅದು ಸತ್ಯವಲ್ಲ. ಆಮೇಲೆ ತಂದೆಯನ್ನು ನೋಡುವಿರಿ. ಆ ಜಗತ್ತನ್ನು ಅವರೇ ಮಾಡಿರಬಹುದು ಅಂದರೆ ಅದೂ ಸತ್ಯವಲ್ಲ.

ಇದೆಲ್ಲಾ ಎಲ್ಲಿಂದ ಬಂತು ಎಂದು ನೀವು ಕೇಳಿದಾಗ ಜನರು ನಿಮಗೆ ಬಾಲಿಶ ಉತ್ತರ ಕೊಟ್ಟರು. ಮೇಲೆ ಒಬ್ಬ ದೊಡ್ಡ ಮನುಷ್ಯ ಇದ್ದಾನೆ. ಅವನೇ ಇದೆಲ್ಲವನ್ನೂ ಮಾಡುತ್ತಾನೆ. ನಾವು ಅವನನ್ನು ನೋಡುವುದಕ್ಕಿಂತ ಮುಂಚೆ ಅವನು ಮೇಲೆ ತಾನೇ ಇರುವುದು ಅಲ್ಲವೇ?

ನೀವು ದುಂಡಗಿನ ಗ್ರಹದ ಮೇಲಿರುವುದು ನಿಜವೇ? ಯಾಕೆಂದರೆ ಬೆಂಗಳೂರಿನ ಜನರು ಭೂಮಿ ಸಪಟವಾಗಿದೆ ಎಂದು ಹೇಳುತ್ತಾರೆ. ಮೇಲೆ ನೋಡಿದರೆ ಸಹಜವಾಗಿ ನೀವು ತಪ್ಪು ದಿಕ್ಕಿನಲ್ಲಿ ನೋಡುತ್ತಿದ್ದೀರಿ. ನೀವು ಆಸ್ಟ್ರೇಲಿಯಾದಲ್ಲಿ ಇದ್ದರೆ ಯಾವ ತರಹ ಮೇಲೆ ನೋಡುತ್ತೀರಿ.

ನಾನು ಹೇಳುತ್ತೇನೆ ನೀವು ಉತ್ತರ ಧೃವದಲ್ಲಿ ಇಲ್ಲವೆಂದು ಈಗ ಸದ್ಯಕ್ಕೆ ನೀವು ಇರುವುದು ಹೆಚ್ಚಾಗಿ 12 ಡಿಗ್ರಿ ಅಕ್ಷಾಂಶ ಬೆಂಗಳೂರು ಇರವಹುದೇನೋ? ಹಾಗಾಗಿ ನೀವು 12 ಡಿಗ್ರಿಯಲ್ಲಿ ನಿಂತು ಮೇಲೆ ನೋಡಿದರೆ ನೀವು ತಪ್ಪು ದಿಕ್ಕಿನಲ್ಲಿ ಇದ್ದೀರಿ. ಸರಿಯಾಗಿ ಮೇಲಿನ ದಿಕ್ಕನ್ನು ನೋಡಲು ನೀವು ಎಸ್ಕಿಮೋ ಆಗಿರಬೇಕು.

ನಾನು ನಿಮ್ಮನ್ನು ಕೇಳ್ತೀನಿ. ಈ ಬ್ರಹ್ಮಾಂಡದಲ್ಲಿ ಯಾವ ಬದಿಯನ್ನು ಮೇಲೆ ಎಂದು ಕರೆಯಲಾಗುವುದು? ಎಲ್ಲಿಯಾದರೂ ಈ ಬದಿ ಮೇಲೆ ಎಂದು ಗುರುತು ಇದೆಯೇ? ಮೊದಲನೆಯದಾಗಿ ನಿಮಗೆ ಮೇಲೆ ಎಲ್ಲಿ ಎಂಬುದೇ ತಿಳಿದಿಲ್ಲ. ಆದರೆ, ಮೇಲೆ ಯಾರಿದ್ದಾರೆ ಎಂಬುದು ತಿಳಿದಿದೆ. ನೀವು ಮನುಷ್ಯರಾಗಿದ್ದರಿಂದ ಮೇಲಿರುವುದು ದೊಡ್ಡ ಮನುಷ್ಯ ಎಂದು ಯೋಚಿಸುತ್ತೀರಿ. ಆ ದೊಡ್ಡ ಮನುಷ್ಯ ದೊಡ್ಡ ಗಂಡಸು ಆಗಿರಬೇಕೆಂದು ಯೋಚಿಸುತ್ತೀರಿ. ಇತ್ತೀಚಿನ ದಿನಗಳಲ್ಲಿ ಆ ದೊಡ್ಡ ಮನುಷ್ಯ ಯಾಕೆ ಹೆಣ್ಣಾಗಿರಬಾರದು ಎಂದು ಮಹಿಳೆಯರು ವಾದಿಸುತ್ತಿದ್ದಾರೆ.

ಆದರೆ, ನೀವು ಒಂದು ಎಮ್ಮೆಯನ್ನು ಕೇಳಿದರೆ ಅದು ದೇವರು ಒಂದು ದೊಡ್ಡ ಎಮ್ಮೆ ಎಂದು ಹೇಳುತ್ತದೆ. ಇದು ಹಲವು ರೀತಿಯಲ್ಲಿ ಚರ್ಚೆಯ ವಿಷಯವಾಗಿದೆ.

ನೋಡಿ ನೀವು ‘ಇದಿ ಅಮೀನ್’ ಯುಗ್ಯಾಂಡ ಮ್ಯಾನ್ ಬಗ್ಗೆ ಕೇಳಿದ್ದೀರ. ದೇವರು ಕಪ್ಪಗಿದ್ದಾನೆ ಎಂದು ಇದಿ ಅಮೀನ್ ಘೋಷಿಸಿದ. ಅಮೇರಿಕಾದಲ್ಲಿ ದೇವರು ಬಿಳಿಯನೋ ಅಥವಾ ಕರಿಯನೋ ಅದೇ ದೊಡ್ಡ ಚರ್ಚೆಯ ವಿಷಯವಾಗಿದೆ. ಹಿಂದಿನ ಚುನಾವಣೆಯಲ್ಲಿ ಅದನ್ನು ತೀರ್ಮಾನಿಸುವ ಪ್ರಯತ್ನವೂ ನಡೆದು ವಿಫಲವಾಯಿತು.

ಆದರೆ, ಈ ಜನರಿಗೆ ಗೊತ್ತಿಲ್ಲವೆಂದು ನಿಮಗೆ ಗೊತ್ತು. ಯಾಕೆಂದರೆ ಅವರು ದೇವೆನ್ನು ನೋಡಿಲ್ಲ. ಅವರು ಕೇವಲ ಅವನ ಧೂತನನ್ನು ಅವನ ಮಗನನ್ನು ಇತರರನ್ನು ಮಾತ್ರ ನೋಡಿದ್ದಾರೆ.

ಆದರೆ, ಭಾರತದಲ್ಲಿ ದೇವರು ಗೋಧಿ ಬಣ್ಣದವನು ಎಂದು ನಮಗೆ ಗೊತ್ತು. ಹೌದು ನಮಗೆ ಗೊತ್ತು. ಏಕೆಂದರೆ ದೇವರು ಸ್ವತ: ಒಂಬತ್ತುಸಲ ಬಂದಿಳಿದಿದ್ದಾನೆ. ಈ ಬಗ್ಗೆ ಭಾರತೀಯರಿಗೆ ಬಹಳ ಗರ್ವವಿದೆ. ಉಳಿದ ಕಡೆಗಳಲ್ಲಿ ಧೂತನಾಗಿ ಅಥವಾ ಮಗನಾಗಿ ಬಂದರೆ ದೇವರು ಸ್ವತ: ಭಾರತಕ್ಕೆ ಬಂದಿದ್ದಾನೆ ಎಂದು ಅನಿವಾಸಿ ಭಾರತೀಯರಂತು ಬಹಳ ಹೆಮ್ಮೆ ಪಡುತ್ತಾರೆ. ಬೇರೆ ಯಾರ ಜವಬ್ದಾರಿ ಮೇಲೂ ಭಾರತೀಯರನ್ನು ಬಿಡಲಾಗದು ಎಂದು ದೇವರು ಹಾಗೆ ಮಾಡಿದ್ದಾನೆ ಎಂದು ನಾನು ಅವರಿಗೆ ನೆನಪಿಸುತ್ತೇನೆ. ಈ ಕೆಲಸವನ್ನು ಸ್ವತಃ ತಾನೇ ಮಾಡಬೇಕೆಂದು ಇಂಬತ್ತು ಸಲ ಬಂದು ವಿಫಲನಾದ. ಒಂಬತ್ತು ಅಥವಾ ಹತ್ತು ಸಲವೋ ಎಂದು ನಾವು ವಾದ ಮಾಡುತ್ತೇವೆ ಹೀಗೆ ಮುಂದುವರಿಯಬಹುದು…
(ಮುಂದುವರೆಯುತ್ತದೆ…)

– ಮಲ್ಲಿಕಾರ್ಜುನ ಮುದನೂರ್

Related Articles

One Comment

Leave a Reply

Your email address will not be published. Required fields are marked *

Back to top button