ಪ್ರಮುಖ ಸುದ್ದಿ

ವೀರಶೈವ-ಲಿಂಗಾಯತ ಅಭಿವೃದ್ಧಿ‌ ನಿಗಮ‌ ರಚನೆಗೆ ಎಂ.ಬಿ.ಪಾಟೀಲ್ ಆಕ್ಷೇಪ

ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಎಂ.ಬಿ.ಪಾಟೀಲ್ ಆಕ್ಷೇಪ

ವಿಜಯಪುರಃ ವೀರಶೈವ-ಲಿಂಗಾಯತ ಅಭಿವೃದ್ಧಿ ‌ನಿಗಮ‌ ರಚನೆ ಮಾಡಿರುವ ಕುರಿತು‌ ನಾನು ಸ್ವಾಗತಿಸುವದಿಲ್ಲ. ಇದರಿಂದ‌ ಸಮಾಜಕ್ಕೆ‌ ಎಳಷ್ಟು ಲಾಭವಾಗಲ್ಲ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಎಂ.ಬಿ.ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವೀರಶೈವ-ಲಿಂಗಾಯತ ಸಮಾಜದ ಅಭಿವೃದ್ಧಿ ಹೊಂದಬೇಕಾದರೆ ಮೊದಲು‌ ಶೇ.16 ರಷ್ಟು ಮೀಸಲಾತಿ‌ ಸೌಲಭ್ಯ ಕಲ್ಪಿಸಲಿ. ಆಗ ಸಮುದಾಯದ‌ ಹಿಂದುಳಿದವರ ಏಳ್ಗೆಗೆ ಸಹಕಾರವಾಗಲಿದೆ ಎಂದು ಅವರು‌ ತಿಳಿಸಿದ್ದಾರೆ.

ನಿಗಮ ರಚನೆ ಮಾಡಿದರೆ,‌ ಸಾಲದು ಅಥವಾ 50 ಕೋಟಿ ನೀಡಿದರೂ ಉಪಯೋಗವಿಲ್ಲ ಕನಿಷ್ಠ 4 ರಿಂದ 5 ಸಾವಿರ ಕೋಟಿ ಅನುದಾನ ಕಲ್ಪಿಸಿದಲ್ಲಿ ಸಮುದಾಯದ ಕೆಳಮಟ್ಟದವರ ಅಭಿವೃದ್ಧಿಗೆ ಸಹಕಾರವಾಗಬಹುದು ಆಗ ನಾನೇ ಸ್ವಾಗತಿಸುತ್ತೇನೆ‌ ಎಂದು ಅವರು‌ ಆಶಯ ವ್ಯಕ್ತಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button