ಪ್ರಮುಖ ಸುದ್ದಿ

ಸಂಶೋಧಕ ಎಂ.ಚಿ.ಮೂ.ಗೆ ಶಹಾಪುರ ಗೆಳೆಯರ ಬಳಗದಿಂದ ಶ್ರದ್ಧಾಂಜಲಿ

ಸಂಶೋಧಕ ಎಂ.ಚಿ.ಮೂ.ಗೆ ಶಹಾಪುರ ಗೆಳೆಯರ ಬಳಗದಿಂದ ಶ್ರದ್ಧಾಂಜಲಿ

ಕುಮಟಃ ನಾವೆಲ್ಲ ಸ್ನೇಹಿತರು ಸೇರಿ ಪ್ರವಾಸ ಹೊರಟಿದ್ದೇವು. ಶುಕ್ರವಾರ ಸಂಜೆ ನಮ್ಮೂರಿನಿಂದ ಎರಡು ಕಾರಿನಲ್ಲಿ 9 ಜನ ಸ್ನೇಹಿತರು ಮಲೆನಾಡು ಪ್ರವಾಸದಲ್ಲಿದ್ದೇವು ಇನ್ನೇನು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಸಿರಸಿ ತಲುಪಿದ್ದೇವೆ.

ಎರಡು ಕಾರನ್ನು ಸಿರಸಿಯ ಮಾರಿಕಾಂಬ ದೇವಸ್ಥಾನದ ಹಿಂದುಗಡೆ ಇರುವ ಮಾರಿಕಾಂಬ ಭಕ್ತ ಕೋಟಿ ಚತ್ರದಲ್ಲಿ ಉಳಿದುಕೊಂಡಿದ್ದೇವೆ. ಒಂದಿಷ್ಟು ವಿಶ್ರಾಂತಿ ಅಥವಾ‌ ನಿದ್ದೆಗೆ ಜಾರಿದ್ದೇವು.

ಬೆಳಗ್ಗೆ 6-7 ಗಂಟೆಗೆ ಎದ್ದು ಸ್ನಾನ‌ ಮಾಡಿ ಶ್ರೀಮಾರಿಕಾಂಬ ದೇವಿಯ ದರ್ಶನ ಪಡೆದು ಹೊರ ಬರುತ್ತಿದ್ದಂತೆ ವಾಟ್ಸಪ್ ನಲ್ಲಿ ಹಿರಿಯ ಸಾಹಿತಿ, ದಂಶೋಧಕ, ಇತಿಹಾಸ ತಜ್ಞ ‌ಎಂ.ಚಿದಾನಂದ ಮೂರ್ತಿ ಇಹಲೋಕ ತ್ಯೆಜಿಸಿದ್ದಾರೆ ಎಂಬ ಸುದ್ದಿ ತಿಳಿಯಿತು.

ಅರೆರೆ ನಾಡಿನ ಶ್ರೇಷ್ಢ ಸಾಹಿತಿ ಇನ್ನಿಲ್ಲ ಎಂಬ ಸುದ್ದಿ‌ ತಿಳಿದು ಎಲ್ಲರೂ ಮಾತಾಡಿಕೊಂಡೆವು.
ಹೊಟೇಲ್ ಮೆಟ್ಟಿಲು ಹತ್ತಿದೇವು ಆದರೆ ಯಾಕೋ ಯಾರೊಬ್ಬರು ಉಪಾಹಾರ ಸೇವನೆಗೆ ಮನಸ್ಸು ಮಾಡಲಿಲ್ಲ ಬರಿ ಟಿ‌ ಕುಡಿದು ಕಾರ್ ಹತ್ತಿದೇವು.

ಮುಂದೆ ಕುಮಟ ಮಾರ್ಗ ಮಧ್ಯೆ‌ ಕಾರ್ ನಿಲ್ಲಿಸಿ‌ ಹಿರಿಯ ಸಾಹಿತಿ ಎಂ.ಚಿ.ಮೂ. ಅವರಿಗೆ ಶ್ರದ್ಧಾಂಜಲಿ ಅರ್ಪಿಸೋಣ ಎಂದೆ ಎಲ್ಲರೂ ಅದೇ ಯೋಚನೆಯಲ್ಲಿದ್ದರು‌ ಹೌದು ಕಾರ್ ನಿಲ್ಲಿಸಿ ಎಂದರು.

ದಟ್ಡ ಕಾನನದ ನಡುವೆ ಮಾರ್ಗದ ಬದಿಯಲ್ಲಿ ಎಲ್ಲರೂ ನಿಂತು ಕೊಂಡೇವು. ಮಿತ್ರ ರಾಜು‌ ಪತ್ತಾರ (ಬಮ್ಮನಳ್ಳಿ) ನಮ್ಮನ್ನಗಲಿದ ನಾಡಿನ‌ ಹಿರಿಯ, ಹೆಮ್ಮೆಯ ಜ್ಞಾನಮೂರ್ತಿ ಅವರ‌ ನಿಧನ ಬಹು ನಷ್ಟ ತಂದಿದೆ. ಅವರ ಸೇವೆ ಕನ್ನಡ ನಾಡಿಗೆ ಅಪಾರ ಎಂದರು.

ಇದೇ ಸಂದರ್ಭ ಒಂದು ನಿಮಿಷ‌ ಅವರ ಆತ್ಮಕ್ಕೆ ಶಾಂತಿ ಕೋರಿ‌ ಮೌನಾಚರಣೆ ಮಾಡಲು ಕೋರಿದರು. ಎಲ್ಲರೂ ಕಾನನದ ಮಧ್ಯ ಯೇ ಶ್ರದ್ಧಾಂಜಲಿ ಸಮರ್ಪಿಸಿದೇವು.

ಅವರ ಕುಟುಂಬಸ್ಥರಿಗೆ‌ ದುಖಃ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಲಾಯಿತು. ಇದೊಂದು ವಿಶೇಷ ಮತ್ತು‌ ಬದುಕಿನ‌ ಕೊನೆಯ ದಿನದವರೆಗೆ ನೆನಪಿರುವಂತ ಕ್ಷಣವಾಗಿದೆ.

ಈ ಸಂದರ್ಭದಲ್ಲಿ ವಿನಯವಾಣಿ ಸಂಪಾದಕರ ಮಲ್ಲಿಕಾರ್ಜುನ ಮುದನೂರ, ಡಾ.ಆನಂದಕುಮಾರ ಕರಕಳ್ಳಿ, ಶಹಾಪುರ ವೀರಶೈವ ಯುವ‌ ಘಟಕದ ಗೌರವ ಅಧ್ಯಕ್ಷ ಮಲ್ಲಿಕಾರ್ಜುನ ಬುಕಿಸ್ಟಗಾರ, ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಬಾಗಲಿ, ಡಾ. ರಾಜೇಂದ್ರ ಸಾಹು ತಡಿಬಿಡಿ,‌ಮಾಜಿ ಶಾಸಕ ಗುರು ಪಾಟೀಲ್ ಆಪ್ತ ಸಹಾಯಕ ಶಕೀಲ್ ಮುಲ್ಲಾ, ಉಮೇಶ ಬಾಗೇವಾಡಿ, ಅಮೃತ ಹೂಗಾರ‌ ಇದ್ದರು.

Related Articles

Leave a Reply

Your email address will not be published. Required fields are marked *

Back to top button