ವಿನಯ ವಿಶೇಷ

ಫೆ.3 ರಂದು ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ

ಶತಾಯುಷಿ ದಿ.ಬಸನಗೌಡ ಉಕ್ಕಿನಾಳ ಸ್ಮರಣಾರ್ಥ ಆರೋಗ್ಯ ಶಿಬಿರ

ಯಾದಗಿರಿ, ಶಹಾಪುರ: ತಾಲೂಕಿನ ಉಕ್ಕಿನಾಳ ಗ್ರಾಮದಲ್ಲಿ ಫೆ.3 ರಂದು ದಿ.ಬಸನಗೌಡ ಮಾಲಿಪಾಟೀಲ ಉಕ್ಕಿನಾಳ ಪ್ರಥಮ ಪುಣ್ಯಸ್ಮರಣೆ ಅಂಗವಾಗಿ ಬಸನಗೌಡ ಮಾಲಿಪಾಟೀಲ ಉಕ್ಕಿನಾಳ ಚಾರಿಟೇಬಲ್ ಟ್ರಸ್ಟ್ ಶಹಾಪುರದಿಂದ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ ಎಂದು ಡಾ.ಮಲ್ಲನಗೌಡ ಪಾಟೀಲ ಉಕ್ಕಿನಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೊನ್ನ ವಿರಕ್ತಮಠದ ಡಾ.ಶಿವಾನಂದ ಮಹಾಸ್ವಾಮಿಗಳು ಅಂದು ಶಿಬಿರವನ್ನು ಬೆಳಗ್ಗೆ 9 ಗಂಟೆ ಸುಮಾರಿಗೆ ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಎಚ್.ಸಿ.ಜಿ.ಕ್ಯಾನ್ಸರ್ ಆಸ್ಪತ್ರೆಯ ವೈದ್ಯರಾದ ಡಾ.ಶೇಖರ ಪಾಟೀಲ ನೇತೃತ್ವದಲ್ಲಿ ಸಂಜೆ 4 ರವರೆಗೆ ಆರೋಗ್ಯ ಶಿಬಿರ ನಡೆಯಲಿದೆ.

ಕಲಬುರಗಿಯ ಅನುಗ್ರಹ ಆಸ್ಪತ್ರೆಯಿಂದ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಸಹ ಈ ಸಂದರ್ಭದಲ್ಲಿ ಮಾಡಲಾಗುವುದು. ಸಕ್ಕರೆ ಕಾಯಿಲೆ, ರಕ್ತದ ಒತ್ತಡ, ಕಿವಿ-ಮೂಗು-ಗಂಟಲು-ನರರೋಗ, ಚಿಕ್ಕ ಮಕ್ಕಳ, ಮೂತ್ರಪಿಂಡ ರೋಗ, ಹೃದಯರೋಗ ಮುಂತಾದ ರೋಗಗಳ ತಪಾಸಣೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಅಲ್ಲದೆ ಅಂದು ಬೆಳಿಗ್ಗೆ 11 ಗಂಟೆಗೆ ಜಮಖಂಡಿಯ ಮಧುರಖಂಡಿ ಬಸವಜ್ಞಾನ ಆಶ್ರಮದ ಶರಣ ಡಾ.ಈಶ್ವರ ಮಂಟೂರ ಅವರಿಂದ ವಿಶೇಷ ಉಪನ್ಯಾಸ ಮತ್ತು ಬಸವಚೇತನ ಕಾರ್ಯಕ್ರಮ ಜರುಗಲಿದೆ.

ಮಾಗಣಗೇರಾ ಬೃಹನ್ಮಠದ ಡಾ.ವಿಶ್ವರಾಧ್ಯ ಶಿವಾಚಾರ್ಯರು ಸಾನ್ನಿಧ್ಯ ವಹಿಸಲಿದ್ದಾರೆ. ಸೊನ್ನ ವಿರಕ್ತಮಠದ ಡಾ.ಶಿವಾನಂದ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಲಿದ್ದಾರೆ. ಹೆಡಗಿಮದ್ರಿಯ ಶಾಂತ ಮಲ್ಲಿಕಾರ್ಜುನ ಪಂಡಿತರಾಧ್ಯ ಶಿವಾಚಾರ್ಯರು, ನಗರದ ಚರಬಸವೇಶ್ವರ ಮಠದ ಬಸಯ್ಯ ಶರಣರು ನೇತೃತ್ವ ವಹಿಸಲಿದ್ದಾರೆ.

ಸಾವಯವ ಕೃಷಿ ಮಿಷನ್ ಮಾಜಿ ಅಧ್ಯಕ್ಷ ಆನಂದ ಅವರು ಉಪನ್ಯಾಸ ನೀಡಲಿದ್ದಾರೆ. ಡಾ.ಶಾಂತಲಿಂಗ ನಿಗ್ಗುಡಿಗಿ ಅವರು ಕ್ಯಾನ್ಸರ್ ರೋಗ ಕುರಿತು ಮಾತನಾಡಲಿದ್ದಾರೆ ಎಂದು ಅವರು ವಿವರಿಸಿದ್ದಾರೆ. ಸಾರ್ವಜನಿಕರು ಶಿಬಿರದಲ್ಲಿ ಭಾಗವಹಿಸಿ ಸದುಪಯೋಗ ಪಡೆಯಬೇಕೆಂದು ಮನವಿ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button