ಪ್ರಮುಖ ಸುದ್ದಿ
ಮೇಕೆದಾಟು ಯೋಜನೆಗೆ ಅನುಮತಿ – ಬೊಮ್ಮಾಯಿ ಹೇಳಿಕೆ
ಮೇಕೆದಾಟು ಯೋಜನೆ ನಿಶ್ಚಿತ – ಸಿಎಂ ಬೊಮ್ಮಾಯಿ
ಬಳ್ಳಾರಿಃ ಮೇಕೆದಾಟು ಯೋಜನೆಗೆ ಅನುಮತಿ ನೀಡಬೇಕಾಗಿರುವದು ಕೇಂದ್ರ ಸರ್ಕಾರ ತಮಿಳುನಾಡು ಅಲ್ಲ. ಹೀಗಾಗಿ ಕೇಂದ್ರ ಮೇಕೆದಾಟು ಯೋಜನೆಗೆ ಅಸ್ತು ನೀಡಲಿದ್ದು, ಯೋಜನೆ ನಿಶ್ಚಿತವಾಗಿ ನಡೆಯಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದಲ್ಲಿ ಮಾಧ್ಯಮಕ್ಕೆ ಹೇಳಿಕೆ ನೀಡೊದ ಅವರು,ಮೇಕೆದಾಟು ಯೋಜನೆಯನ್ನು ರಾಜಕೀಯ ಹೇಳಿಕೆ ನೀಡುತ್ತಿದ್ದು, ಅದೆಲ್ಲ ನಡೆಯುವದಿಲ್ಲ. ಯೋಜನೆಗೆ ತಮಿಳುನಾಡು ಅನುಮತಿ ಬೇಕಿಲ್ಲ. ಅವರ ಅನುಮತಿ ಯಾಕೆ ಬೇಕು.? ಕೇಂದ್ರ ಸರ್ಕಾರ ಅನುಮತಿ ಬೇಕು. ಅದು ನೀಡಲಿದೆ ಎಂದುತ್ತರಿಸಿದರು.