ಮೇಕೆದಾಟು ಯೋಜನೆ ಯಾವ ಪಕ್ಷವು ವಿರೋಧಿಸಿಲ್ಲ, ಯಾರ ವಿರುದ್ಧ ಪಾದಯಾತ್ರೆ ಮಾಡ್ತಿದ್ದಾರೆ ಗೊತ್ತಿಲ್ಲ – ಆರಗಜ್ಞಾನೇಂದ್ರ
ಮೇಕೆದಾಟು ಯೋಜನೆ ಯಾವ ಪಕ್ಷವು ವಿರೋಧಿಸಿಲ್ಲ, ಯಾರ ವಿರುದ್ಧ ಪಾದಯಾತ್ರೆ ಮಾಡ್ತಿದ್ದಾರೆ ಗೊತ್ತಿಲ್ಲ – ಆರಗಜ್ಞಾನೇಂದ್ರ
ಬೆಂಗಳೂರಃ ಯಾರ ವಿರುದ್ಧ ಕಾಂಗ್ರೆಸ್ ಪಾದಯಾತ್ರೆ ಮಾಡುತ್ತಿದೆ ಗೊತ್ತಿಲ್ಲ. ಯಾವ ಪಕ್ಷವು ಮೇಕೆದಾಟು ಯೋಜನೆ ವಿರೋಧಿಸಿಲ್ಲ ಇದೊಂದು ರಾಜಕೀಯ ಲಾಭಕ್ಕಾಗಿ, ಪ್ರಚಾರಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಆರಗಜ್ಞಾನೇಂದ್ರ ಟೀಕಿಸಿದರು.
ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ಕೋರ್ಟ್ ಆದೇಶ ನೀಡಿದ್ದರೂ, ಕೋರ್ಟ್ ತರಾಟೆಗೆ ತೆಗೆದುಕೊಂಡ ಮೇಲೂ ಪಾದಯಾತ್ರೆ ನಡೆಯಲೇಬೇಕು ಎನ್ನುವದು ಎಷ್ಟು ಸಮಂಜಸ. ಕೋವಿಡ್ ತೀವ್ರತೆ ಹಿನ್ನೆಲೆ ಪಾದಯಾತ್ರೆ ತಡೆಯಲೇಬೇಕಿದೆ. ಸರ್ಕಾರ ಮತ್ತು ಕೊರ್ಟ್ ಆದೇಶಕ್ಕೂ ಕ್ಯಾರೆ ಎನ್ನದೆ ಇದ್ರೆ ಕಟ್ಟು ನಿಟ್ಟಿನ ಕಾನೂನು ಕ್ರಮ ತೆಗೆದುಕೊಳ್ಳುವದು ಅನಿವಾರ್ಯ ಎಂದು ಅವರು ತಿಳಿಸಿದರು.
ಅಲ್ಲದೆ ಪಾದಯಾತ್ರೆ ಯಲ್ಲಿ ಭಾಗವಹಿಸಿದ ವೀರಪ್ಪ ಮೊಯ್ಲಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಮತ್ತು ಪಾದಯಾತ್ರೆ ಸಂದರ್ಭದಲ್ಲಿ ಯಾವ ಶಾಲೆಗಳಿಗೆ ಭೇಟಿ ಕೊಟ್ಟಿದ್ದರೋ ಆ ಶಾಲಾ ಮಕ್ಕಳಲ್ಲೂ ಕೊರೊನಾ ಕಾಣಿಸಿಕೊಂಡಿದೆ. ಹೀಗಾಗಿ ಕಾಂಗ್ರೆಸ್ ನಾಯಕರು ಇಂತಹ ವಾತಾವರಣದಲ್ಲಿ ಪಾದಯಾತ್ರೆ ಮಾಡುವದು ಸರಿಯಲ್ಲ ಎಂದರು.