Homeಅಂಕಣಜನಮನಮಹಿಳಾ ವಾಣಿ

ಈ ತರಹ ಒಮ್ಮೆ ರುಚಿಕರವಾದ ಮೆಂತ್ಯೆ ಮಟನ್ ಮಾಡಿ ನೋಡಿ…

ಬೇಕಾಗುವ ಪದಾರ್ಥಗಳು…

  • ಮೆಂತ್ಯೆ ಸೊಪ್ಪು-ಸ್ವಲ್ಪ
  • ಮಟನ್- ಅರ್ಧ ಕೆಜಿ
  • ತೆಂಗಿನ ಹಾಲು- ಸ್ವಲ್ಪ
  • ಶುಂಠಿ-ಬೆಳ್ಳುಳ್ಳಿ-ಸ್ವಲ್ಪ
  • ಹಸಿ ಮೆಣಸಿನಕಾಯಿ- ಸ್ವಲ್ಪ
  • ಗರಂ ಮಸಾಲಾ ಪೌಡರ್- 1 ಚಮಚ
  • ಈರುಳ್ಳಿ-1
  • ಟೊಮ್ಯಾಟೊ- 1
  • ಎಣ್ಣೆ – ಸ್ವಲ್ಪ
  • ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ…

  • ಮೊದಲು ಬಾಣಲೆಯಲ್ಲಿ ಎಣ್ಣೆ ಹಾಕಿ ನಂತರ ಹೆಚ್ಚಿದ ಈರುಳ್ಳಿ ಹಾಕಿ ಅದು ಕಂದು ಬಣ್ಣಕ್ಕೆ ತಿರುಗಿದ ಮೇಲೆ ಅದರಲ್ಲಿ ರುಬ್ಬಿಟ್ಟುಕೊಂಡ ಮೆಣಸಿನಕಾಯಿ ಹಾಕಿ ಸ್ವಲ್ಪ ಹುರಿಯಿರಿ. ನಂತರ ಇದಕ್ಕೆ ಮಟನ್ ಹಾಕಿ ಮತ್ತೆ ಫ್ರೈ ಮಾಡಿ.
  • ಬಳಿಕ ಅದಕ್ಕೆ ಟೊಮೆಟೋ ಹಾಕಿ ಮೆತ್ತಗಾಗುವವರೆಗೂ ಕೈಯಾಡಿಸಿ. ಬಳಿಕ ಹೆಚ್ಚಿದ ಮೆಂತ್ಯೆ ಸೊಪ್ಪು ಹಾಕಿ ನಂತರ ಹಸಿ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಕಿ ಸ್ವಲ್ಪ ಫ್ರೈ ಮಾಡಿ.
  • ತೆಂಗಿನ ಹಾಲು ಹಾಗೂ ಗರಂ ಮಸಾಲಾ ಪೌಡರ್ ಹಾಕಿ ಕುದಿಯಲು ಬಿಡಿ. ನಂತರ ಸ್ವಲ್ಪ ಉಪ್ಪು ಹಾಕಿ ಮತ್ತೆ ಕುದಿಸಿ. ಕೊನೆಯಲ್ಲಿ ಕತ್ತರಿಸಿದ ಮೆಂತ್ಯೆ ಸೊಪ್ಪು ಹಾಕಿದರೆ ಮೆಂತ್ಯೆ ಮಟನ್ ಸವಿಯಲು ಸಿದ್ಧ.

Related Articles

Leave a Reply

Your email address will not be published. Required fields are marked *

Back to top button