ಪ್ರಮುಖ ಸುದ್ದಿ
ಮರ ಕಡಿಯದಂತೆ ಸುಪ್ರೀಂ ಸೂಚನೆ-ಮೆಟ್ರೋ ಯೋಜನೆ ಸದ್ಯ ಸ್ಥಗಿತ
ಮುಂಬೈ ಮೆಟ್ರೋ ಗಾಗಿ ಮರಗಳ ನಾಶ
ಮುಂಬೈಃ ಇಲ್ಲಿನ ಆರೆ ಪ್ರದೇಶದಲ್ಲಿ ಮಹಾರಾಷ್ಟ್ರ ಸರ್ಕಾರ ಮೆಟ್ರೀ ನಿರ್ಮಾಣಕ್ಕಾಗಿ ಮರಗಳ ಮಾರಣ ಹೋಮ ನಡೆಸಲು ಮುಂದಾಗಿತ್ತು. ಇದೀಗ ಸುಪ್ರೀಂಕೋರ್ಟ್ ಮರಗಳ ನಾಶಕ್ಕೆ ಬ್ರೇಕ್ ಹಾಕಿದೆ.
ಮರಗಳನ್ನು ಕಡಿಯದಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ಮರಗಳನ್ನು ಕಡೆಯದಂತೆ ಸೂಚನೆ ನೀಡಿರುವ ಹಿನ್ನೆಲೆ ಸದ್ಯ ಮೆಟ್ರೋ ನಿರ್ಮಾಣ ಕಾರ್ಯ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ಆದರೆ ಸರ್ಕಾರ ಮೆಟ್ರೋ ಯೋಜನೆ ಅನುಷ್ಠಾನ ಕುರಿತು ಕೋರ್ಟ್ಗೆ ಸಮಗ್ರ ಮಾಹಿತಿ ಮನವರಿಕೆ ಮಾಡಲು ಮುಂದಾಗಿದ್ದು, ಮುಂದಿನ ವಿಚಾರಣೆಯಲ್ಲಿ ಸಮರ್ಪಕವಾಗಿ ಜನಪರ ಯೋಜನೆಯ ಮಾನದಂಡನೆ ಕುರಿತು ವಾದಿಸಲು ಮುಂದಾಗಿದೆ ಎನ್ನಲಾಗಿದೆ. ಮರಗಳ ಮಾರಣಹೋಮ ಕುರಿತು ನೂರಾರು ಜನರು ಪ್ರತಿಭಟನೆ ನಡೆಸಿರುವದು ಇಲ್ಲಿ ಸ್ಮರಿಸಬಹುದು.