ಕಾವ್ಯ
“ಅಪರೂಪದ ಮಾದಕ” ಕಾಸೆ ಅವರ ಬರಹದಲ್ಲಿ ಮೂಡಿಬಂದ ಕಾವ್ಯ
ಅಪರೂಪದ ಮಾದಕ
ಸಂಜೆಗಳಿಗೆ ತಂಪನ್ನೆರೆದಿತ್ತು
ನಿನ್ನ ಮುಂಗುರುಳು ಅಂತೆ
ಅದೇನು ಅದು ಅಂತಹ ಜಾದೂ
ನೆರಳಾಯಿತು ಈಗ ಆ ಸುಡು ಬಿಸಿಲೆ
ರೇಷ್ಮೆ ಕಾಂತೀಯ
ಸರಸ ಸಲ್ಲಾಪದ
ಜಾರಿ ಹಾರುವ
ನವ್ಯ ಕಾವ್ಯ ಸಾಹಸ
ಬಿರುಗಾಳಿ ಬೀಸಿ ಶುರುವಾದ ನರ್ತನ
ಚೂರಾಗಿಸಿತ್ತು ಒಳಗೆ ನನ್ನ ಎದೆಗಾರಿಕೆ
ಆಚೆ ಬೀಸುವ ತಂಗಾಳಿಯ ಕಳ್ಳಾಟ
ನಾಚಿ ನುಲಿಯಿತು ಸುಳಿದು ನಿನ್ನೆಡೆಗೆ
ಉಯ್ಯಾಲೆ ತೂಗುವ
ಅಂದದ ಮೋಹಕ
ಕೆನ್ನೆಯ ಸ್ಪರ್ಶ
ಅಪರೂಪದ ಮಾದಕ
ನೀಳವಾದ ಕುಡಿನೋಟ ನಾಗವೇಣಿ
ತಂದೆ ಯಾಕೆ ನಸು ತಳಮಳ
ತುಂಡಾಯಿತು ಚಂದ್ರನ ಬಿಂಬವೇ
ಬಿಚ್ಚು ಕತ್ತಿಯದು ಅಂತಹ ಪ್ರಭಾವ
ಬಳುಕಿನ ಓಲಾಟ
ತುಳುಕಿತು ಮಂದಹಾಸ
ಈ ಸಾಲುಗಳು ಸಹ
ಆಗಿ ಹೋದವು ನಿನ್ನ ಸ್ವಂತ
–ಬಸವರಾಜ ಕಾಸೆ.ಬೆಂಗಳೂರ.