ಪ್ರಮುಖ ಸುದ್ದಿ
ನಾಳೆಯೇ ನನಗೂ ಮಂತ್ರಿಗಿರಿ ಕೊಡಿ : ಸಿಎಂ ಬಳಿ ಶಾಸಕ ರಾಜೂಗೌಡ ಬೇಡಿಕೆ
ಬೆಂಗಳೂರು: ನಾಳೆ ಸಚಿವ ಸಂಪುಟ ವಿಸ್ತರಣೆಗೆ ಸಿಎಂ ಯಡಿಯೂರಪ್ಪ ನಿರ್ಧರಿಸಿದ್ದು ಶಾಸಕರಾದ ಉಮೇಶ ಕತ್ತಿ ಹಾಗೂ ಅರವಿಂದ ಲಿಂಬಾವಳಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗುತ್ತಿದೆ. ಇದೇ ಸಂದರ್ಭದಲ್ಲಿ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುರಪುರ ಕ್ಷೇತ್ರದ ಬಿಜೆಪಿ ಶಾಸಕ ರಾಜೂಗೌಡ ಅವರೂ ಸಹ ಯಡಿಯೂರಪ್ಪ ಬಳಿ ಮಂತ್ರಿಗಿರಿಗೆ ಮನವಿ ಮಾಡಿದ್ದಾರೆ. ನಾಳೆಯೇ ನನಗೂ ಸಹ ಸಚಿವ ಸ್ಥಾನ ನೀಡಿ ಎಂದು ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.