ಪ್ರಮುಖ ಸುದ್ದಿ

ರೈತರ ಆತ್ಮಹತ್ಯೆ ತಡೆಗೆ ಋಣಮುಕ್ತ ಕಾಯ್ದೆ ಜಾರಿಗೆ ಕಪ್ರಾರೈ ಸಂಘ ಆಗ್ರಹ

 

ಯಾದಗಿರಿ, ಶಹಾಪುರಃ ರಾಜ್ಯದಲ್ಲಿ ರೈತರ ಆತ್ಮಹತ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ರೈತರ 50 ಸಾವಿರ ಸಾಲ ಮನ್ನಾ ಮಾಡಿದ ಮಾತ್ರಕ್ಕೆ ರೈತ ಖುಷಿಯಾಗಿಲ್ಲ. ಖಾಸಗಿ ಸಾಲವು ಮನ್ನಾ ಮಾಡುವ ಅಗತ್ಯವಿದೆ. ಅಲ್ಲದೆ ರೈತರ ಆತ್ಮಹತ್ಯೆಗೆ ಋಣಮುಕ್ತ ಕಾಯ್ದೆ ಜಾರಿಗೆ ತರಬೇಕೆಂದು ಆಗ್ರಹಿಸಿ ಇಲ್ಲಿನ ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕಿಗೆ ಆಗಮಿಸಿದ ಕೃಷಿ ಮಂತ್ರಿ ಶಿವಶಂಕರರಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿತು.

ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಕುರಿತು ಕೂಡಲೇ ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಿ ರೈತರ ಖಾಸಗಿ ಸಾಲವು ಮನ್ನಾ ಮಾಡುವ ಮೂಲಕ ಅನುಕೂಲ ಕಲ್ಪಿಸಬೇಕು.

ಕರ್ನಾಟಕ ಸರ್ಕಾರ ಬಡವರು, ಕೂಲಿಕಾರರು ಹಾಗೂ ಬಡ ರೈತರಿಗೆ ಅನುಕೂಲವಾಗುವ ಭೂ ಬಳಕೆ ಮತ್ತು ವ್ಯವಸಾಯ ನೀತಿ ಅನುಸರಿಸುವ ಬದಲು ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಅನುಕೂಲವಾಗುವಂತಹ ನೀತಿ ಜಾರಿಗೆ ತರಲು ಮುಂದಾಗಿರುವುದು ಖಂಡನೀಯವಾಗಿದೆ.

ಅಲ್ಲದೆ ಸರ್ಕಾರದ ನೆರವು ಪಡೆಯದೇ ಲಕ್ಷಾಂತರ ಎಕರೆ ಸರ್ಕಾರಿ ಬಂಜರು ಭೂಮಿಯನ್ನು ಸ್ವಂತ ಕುಟುಂಬದ ಪರಿಶ್ರಮ ಹಾಗೂ ಬಂಡವಾಳ ಹಾಕಿ ಅಭಿವೃದ್ಧಿ ಪಡಿಸಿದವರನ್ನು ಬೆನ್ನು ತಟ್ಟಿ ಬೆಂಬಲಿಸಬೇಕಿದ್ದ ಸರ್ಕಾರ ಅವರನ್ನು ಅಂತಹ ಜಮೀನಿಂದ ಹೊರಗಟ್ಟಿ ಬೀದಿಗೆ ತಳ್ಳುವ ಕೆಲಸ ಮಾಡಲು ಮುಂದಾಗಿದೆ ಇದು ತುಂಬಾ ವಿಷಾಧಕರ ಸಂಗತಿ.

ಕೂಡಲೇ ಸರ್ಕಾರ ಇಂತಹ ಕೆಲಸಕ್ಕೆ ಕೈಹಾಕದೆ ರೈತರ ಸಮಸ್ಯೆಗಳ ನಿವಾರಣೆ ಮುಂದಗಬೇಕು. ರೈತ ಆತ್ಮಹತ್ಯೆ ತಡೆಗೆ ಸೂಕ್ತ ಕ್ರಮಕೈಗೊಳ್ಳಬೇಕು. ಸಾಲಬಾಧೆಯಿಂದ ಸಾವಿರಾರು ರೈತರು ಇಂದಿಗೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ತಡೆಗೆ ಕೇಂದ್ರ ಸರ್ಕಾರವಾಗಲಿ ರಾಜ್ಯ ಸರ್ಕಾರವಾಗಲಿ ಪರಿಣಾಮಕಾರಿ ಕ್ರಮಕೈಗೊಳ್ಳುವಲ್ಲಿ ವಿಫಲವಾಗಿವೆ ಎಂದು ದೂರಿದರು.

ಅಲ್ಲದೆ ಕೂಡಲೇ ರೈರಿತಗೆ ಬರಬೇಕಾದ ವಿಮಾ ಹಣವನ್ನು ಸಮರ್ಪಕವಾಗಿ ರೈತರ ಖಾತೆಗೆ ಜಮೆಯಾಗಬೇಕು. ಸಹಕಾರಿ ಬ್ಯಾಂಕ್‍ಗಳಲ್ಲಿ ಮಹಾ ವಂಚನೆ ನಡೆಯುತ್ತಿದೆ. ಕೂಡಲೇ ಸರ್ಕಾರ ಜವಬ್ದಾರಿ ಅರಿತು ನಡೆದುಕೊಂಡು ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಮನವಿ ಮಾಡಿದರು. ಮತ್ತು ಡಾ.ಎಂ.ಎಸ್.ಸ್ವಾಮಿನಾಥನ್ ವರದಿ ಜಾರಿಯಾಗಬೇಕು. ಸಮರ್ಪಕವಾಗಿ ಮಳೆ ಬಾರದ ಹಿನ್ನೆಲೆ ನೀರಾವರಿ ಪ್ರದೇಶವನ್ನು ಬರಗಾಲವೆಂದು ಘೋಷಿಸಬೇಕು.

ಯಾದಗಿರಿ ಜಿಲ್ಲೆಯ ಸಾವಿರಾರು ಬಡ ರೈತರು ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸದೆ ಹಕ್ಕುಪತ್ರ ನೀಡಬೇಕೆಂದು. ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಯ ಸಹಕಾರಿ ಸಂಘದಲ್ಲಿ ಜಿಡಿಸಿಸಿ ಬ್ಯಾಂಕ್ ನಲ್ಲಿ ನಡೆದ ಅವ್ಯವಹಾರ ಕುರಿತು ಸಮಗ್ರ ತನಿಖೆ ನಡೆಸಬೇಕು ಮತ್ತು ಶಹಾಪುರದಲ್ಲಿ ಕಂದಾಯ ಉಪವಿಭಾಗ ಕಚೇರಿ ತೆರಯಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ರೈತ ಮುಖಂಡ ಚನ್ನಪ್ಪ ಆನೇಗುಂದಿ, ಎಸ್.ಎಂ.ಸಾಗರ, ಶಿವಪ್ಪ ಪೂಜಾರಿ ಮತ್ತು ಹಣಮಂತ್ರಾಯಗೌಡ ಇತರರಿದ್ದರು.

Related Articles

Leave a Reply

Your email address will not be published. Required fields are marked *

Back to top button