ಪ್ರಮುಖ ಸುದ್ದಿ
DK ಶಿವಕುಮಾರ ಶ್ರೀಕೃಷ್ಣ ಪರಮಾತ್ಮನಿದ್ದಂತೆ- ಸಚಿವೆ ಜಯಮಾಲಾ
DK ಶಿವಕುಮಾರ ಶ್ರೀಕೃಷ್ಣ ಪರಮಾತ್ಮನಿದ್ದಂತೆ- ಸಚಿವೆ ಜಯಮಾಲಾ
ಬೆಂಗಳೂರುಃ ಕಾಂಗ್ರೆಸ್ ಹಿರಿಯ ಮುಖಂಡ, ಸಚಿವ ಡಿ.ಕೆ.ಶಿವಕುಮಾರ ಯಾವುದೇ ಸಮಸ್ಯೆಗೆ ಸಂಬಂಧಿಸಿದಂತೆ ಸಂಧಾನಕ್ಕೆ ಇಳಿದರೆ ಅದು ಯಶಸ್ವಿಗೊಳಿಸುವ ಚಾಣಕ್ಷ್ಯತೆಯನ್ನು ಅವರು ಹೊಂದಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ ಹೇಳಿದರು.
ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಅವರು ಡಿಕೆಶಿ ಬಗ್ಗೆ ಮೆಚ್ಷುಗೆ ವ್ಯಕ್ತಪಡಿಸಿದರು. ಡಿಕೆ ಶಿವಕುಮಾರ್ ಅವರು ಪಕ್ಷದ ಶಿಸ್ತಿನ
ಕಟ್ವು ನಿಟ್ಟಿನ ವ್ಯಕ್ತಿತ್ವ ಶಿಸ್ತಿನ ಸಿಪಾಯಿಯಂತೆ ಕೆಲಸ ಮಾಡುವವರಾಗಿದ್ದಾರೆ.
ಅವರ ಶಕ್ತಿ ಸಮಾರ್ಥ್ಯ ಎಂತಹದ್ದು ಎನ್ನುವಂತದ್ದು ಹಲವು ಸಮಸ್ಯಾತ್ಮಕ ಘಟನೆಗಳನ್ನು ತುಂಬಾ ಸುಲಭವಾಗಿ ತಮ್ಮ ಬುದ್ಧಿ ಶಕ್ತಿಯಿಂದಲೇ ವಿಜಯ ಸಾಧಿಸಿದವರು ಎಂದು ಹೊಗಳಿದರು.
ಹೀಗಾಗಿ ಯಾವುದೇ ಸಂಧಾನಕ್ಕೆ ಅವರು ಭಾಗಿಯಾದಲ್ಲಿ ಖಂಡಿತ ಯಶಸ್ವಿಹೊಂದುವಂತ ಸಶಕ್ತಿ ಅವರಲ್ಲಿದೆ ಎಂದರು.