ಬಹುಭಾಷಾ ನಟ ಪ್ರಕಾಶ್ ರೈ ಬಳಿ ಕ್ಷಮೆ ಯಾಚಿಸಿದ ಸಚಿವ ಯು.ಟಿ.ಖಾದರ್?
ಮಂಗಳೂರು: ಕರಾವಳಿ ಉತ್ಸವಕ್ಕೆ ಚಾಲನೆ ನೀಡಿದ ಬಹುಭಾಷಾ ನಟ ಪ್ರಕಾಶ್ ರೈ ತುಸು ಬೇಸರದಿಂದಲೇ ಮಾತುಗಳನ್ನಾಡಿದ್ದಾರೆ. ಕರಾವಳಿ ಉತ್ಸವ ಉದ್ಘಾಟಿಸುತ್ತಿರುವುದಕ್ಕೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಒಬ್ಬ ಮನುಷ್ಯನ ಕೊಲ್ಲಬೇಕು ಅಂದಾಗ ಮೊದಲು ನಮ್ಮೊಳಗಿನ ಮನುಷ್ಯ ಸಾಯುತ್ತಾನೆ. ದುರ್ದೈವದ ಸಂಗತಿ ಅಂದರೆ ಕೊಲೆ ಪ್ರಕರಣದಲ್ಲೂ ರಾಜಕೀಯ ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.
ಬಳಿಕ ಮಾತನಾಡಿದ ಸಚಿವ ಯು.ಟಿ.ಖಾದರ್ ಅವರು ನಟ ಪ್ರಕಾಶ್ ರೈ ಅವರಿಗೆ ನಮ್ಮ ಜಿಲ್ಲೆಯ ಬಗ್ಗೆಯೂ ಬೇಸರ ಇರುವುದನ್ನು ನಾನು ಗಮನಿಸಿದ್ದೇನೆ. ನಮ್ಮಲ್ಲೂ ಕೆಲವರು ಇದ್ದಾರೆ, ಅದು ಅವರ ತಪ್ಪಲ್ಲ. ಮಗು ಹುಟ್ಟಿದ ಕೂಡಲೇ ನಾಲಿಗೆಯನ್ನು ಕ್ಲೀನ್ ಮಾಡುತ್ತಾರೆ. ಆದರೆ, ಇಲ್ಲಿ ಕೆಲವರ ನಾಲಿಗೆ ಕ್ಲೀನ್ ಮಾಡೋದನ್ನು ಅವರ ತಾಯಂದಿರು ಮರೆತಿದ್ದಾರೆ. ಪರಿಣಾಮ ಅವರು ಹಾಗೆಲ್ಲಾ ಮಾತನಾಡುತ್ತಾರೆ. ಹೀಗಾಗಿ, ಅಂತವರ ಬದಲಿಗೆ ನಾನೇ ನಿಮ್ಮ ಬಳಿ ಕ್ಷಮೆ ಕೇಳುತ್ತೇನೆ ಎಂದು ಪ್ರಕಾಶ್ ರೈ ಅವರಿಗೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.