ಪ್ರಮುಖ ಸುದ್ದಿ
ರಾಹುಲ್ ಗಾಂಧಿಗಾಗಿ ಟ್ರಾಫಿಕ್ ನಿಯಂತ್ರಿಸಲು ಮುಂದಾದ ಸಚಿವ ಯು.ಟಿ.ಖಾದರ್ ಗೆ ಶಾಕ್!
ಮಂಗಳೂರು : ಕಲ್ಲಾಪು ಗ್ರಾಮದಿಂದ ಉಳ್ಳಾಲದವರೆಗೆ ರಾಹುಲ್ ಗಾಂಧಿ ರೋಡ್ ಶೋ ಹಿನ್ನೆಲೆ ಟ್ರಾಫಿಕ್ ಜಾಮ್ ನಿಯಂತ್ರಣಕ್ಕೆ ಸಚಿವ ಯು.ಟಿ.ಖಾದರ್ ಮುಂದಾಗಿದ್ದಾರೆ. ಕಾರಿನಿಂದ ಇಳಿದು ಖುದ್ದಾಗಿ ಸಚಿವರೇ ಟ್ರಾಫಿಕ್ ಕಂಟ್ರೋಲ್ನಲ್ಲಿ ತೊಡಗಿದ್ದಾರೆ. ಆದರೆ, ಇದೇ ವೇಳೆ ಕಾರು ಮತ್ತು ಟ್ಯಾಂಕರ್ ನಡುವೆ ಡಿಕ್ಕಿ ಸಂಭವಿಸಿದೆ.
ಕಣ್ಣೆದುರೇ ನಡೆದ ಅಪಘಾತ ಕಂಡು ಸಚಿವ ಯು.ಟಿ.ಖಾದರ್ ಶಾಕ್ ಆಗಿದ್ದಾರೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಂಡ ಸಚಿವ ಖಾದರ್ ಅಪಘಾತಕ್ಕೀಡಾದ ವಾಹನಗಳನ್ನು ತೆರವುಗೊಳಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆಂದು ತಿಳಿದು ಬಂದಿದೆ.