ಪ್ರಮುಖ ಸುದ್ದಿ
ಹೈಕಅಮಂ ಇನ್ಮುಂದೆ ಕಕಅಮಂ ಏನು ಅರ್ಥವಾಗಲಿಲ್ವಾ.? ಇದನ್ನೋದಿ
ಹೈಕಅಮಂ ಇನ್ಮುಂದೆ ಕಕಅಮಂ ಏನು ಅರ್ಥವಾಗಲಿಲ್ವಾ.? ಇದನ್ನೋದಿ.!
ಬೆಂಗಳೂರಃ ಜನರ ಬಹುದಿನಗಳ ಬೇಡಿಕೆಯಂತೆ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನು ಇನ್ಮುಂದೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಎಂದು ಮರು ನಾಮಕರಣ ಮಾಡಲು ಶುಕ್ರವಾರ ಸಿಎಂ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾದುಸ್ವಾಮಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಕುರಿತು ಮಾಹಿತಿ ನೀಡಿದರು.
ಇನ್ಮುಂದೆ ಹೈದ್ರಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ಹೆಸರು ತೆಗೆದು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಎಂದು ಮರುನಾಮಕರಣ ಮಾಡುವ ಮೂಲಕ ಸೂಕ್ತ ಕ್ರಮಕೈಳ್ಳಲಾಗಿದ್ದು, ಆ ಭಾಗದ ಜನರ ಮತ್ತು ಜನಪ್ರತಿನಿಧಿಗಳ ಆಸೆ, ಬೇಡಿಕೆಗೆ ಸ್ಪಂಧಿಸಲಾಗಿದೆ ಎಂದರು.