ಜಿಲ್ಲಾ ಉಸ್ತುವಾರಿ ಸಚಿವ ಚವ್ಹಾಣ ರಸ್ತಾಪುರ ಗ್ರಾಮಕ್ಕೆ ಭೇಟಿ
ಸಿಡಿಲಿಗೆ ಬಲಿಯಾಗಿದ್ದ ಮಹಿಳಾ ಕುಟುಂಬಕ್ಕೆ 5 ಲಕ್ಷ ಪರಿಹಾರ ಚಕ್ ವಿತರಣೆ
ಕುಟಂಬಕ್ಕೆ ಸಾಂತ್ವನ ಹೇಳಿದ ಸಚಿವ ಪ್ರಭು ಚವ್ಹಾಣ
ಶಹಾಪುರಃ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ರವಿವಾರ ರಸ್ತಾಪುರ ಗ್ರಾಮದ ಶನಿವಾರ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಗ ಸಿಡಲಿಗೆ ಬಲಿಯಾಗಿದ್ದ ಶರಬಮ್ಮ ಗಂಡ ಹಯ್ಯಾಳಪ್ಪ(45) ಅವರ ಮನೆಗೆ ಆಗಮಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಅಲ್ಲದೆ ಇದೇ ಸಂದರ್ಭದಲ್ಲಿ 5 ಲಕ್ಷ ರೂ.ಪರಿಹಾರ ಚಕ್ ವಿತರಿಸಿದರು. ಜೊತೆಗೆ ವಯಕ್ತಿವಾಗಿ 11 ಸಾವಿರ ರೂ.ಯನ್ನು ಸಚಿವರು ಕುಟುಂಬಸ್ಥರಿಗೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆಕಸ್ಮಿಕವಾಗಿ ಪ್ರಕೃತಿ ಅವಘಡದಿಂದ ರೈತ ಮಹಿಳೆ ಮೃತಳಾಗಿದ್ದು, ಇಡಿ ಕುಟುಂಬವನ್ನು ಸಲುಹುತ್ತಿದ್ದ ರೈತ ಮಹಿಳೆ ಮೃತ ಹೊಂದಿದ ಪರಿಣಾಮ ಕುಟುಂಬಸ್ಥರು ಕುಗ್ಗಿ ಹೋಗಿದ್ದಾರೆ. ದೃತಿಗೆಡಯವ ಅಗತ್ಯವಿಲ್ಲ. ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಕುಟುಂಬಸ್ಥರಿಗೆ ಕಲ್ಪಿಸಲಾಗುವದು. ಕುಟುಂಬಸ್ಥರು ಧೈರ್ಯವಾಗಿ ಇರಬೇಕು.
ಮುಂದಿನ ಬದುಕನ್ನು ಕಟ್ಟಿಕೊಳ್ಳಬೇಕು. ಅದಕ್ಕೆ ಬೇಕಾದ ಪೂರಕ ಅನುಕೂಲ ಜಿಲ್ಲಾಡಳಿತ ಕಲ್ಪಿಸಲಿದೆ. ಮಗುವಿಗೆ ಚನ್ನಾಗಿ ಶಿಕ್ಷಣ ಕೊಡಿಸಿ. ನಾವೆಲ್ಲ ಇದ್ದೇವೆ ಎಂದು ಕುಟುಂಬಸ್ಥರಿಗೆ ಆತ್ಮಸ್ಥೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ, ಜಿಲ್ಲಾಧಿಕಾರಿ ಕೂರ್ಮಾರಾವ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರ, ಡಾ.ಚಂದ್ರಶೇಖರ ಸುಬೇದಾರ, ರಾಜೂಗೌಡ ಉಕ್ಕಿನಾಳ, ಸಾಯಬಣ್ಣ ಪುರ್ಲೆ ಸೇರಿದಂತೆ ತಾಪಂ ಅಧ್ಯಕ್ಷ ನಾಗಣ್ಣ ಪೂಜಾರಿ, ಅಡಿವೆಪ್ಪ ಜಾಕಾ ಇತರರಿದ್ದರು.