ಪ್ರಮುಖ ಸುದ್ದಿ
ಇದು ಪುನಾರಗಮನವಷ್ಟೇ ಎಂದ ನೂತನ ಮಿನಿಸ್ಟರ್ ಜಗದೀಶ್ ಶೆಟ್ಟರ್!
ಬೆಂಗಳೂರು : ಯಡಿಯೂರಪ್ಪ ಅವರು ಹಿರಿಯ ಮತ್ತು ನಮ್ಮೆಲ್ಲರ ಪ್ರಶ್ನಾತೀತ ನಾಯಕರು. ಅವರ ನೇತೃತ್ವದ ಸರ್ಕಾರದಲ್ಲಿ ನಾನು ಮಂತ್ರಿ ಆಗಿದ್ದು ಯಾವುದೇ ಹಿನ್ನೆಡೆಯಲ್ಲ , ಮುಜುಗರವೂ ಇಲ್ಲ. ಮುಖ್ಯಮಂತ್ರಿ ಆಗಿದ್ದು ಮತ್ತೆ ಮಂತ್ರಿ ಆಗಿದ್ದು ನನ್ನ ಪ್ರಕಾರ ಪುನರಾಗಮನ ಅಷ್ಟೇ ಎಂದು ನೂತನ ಸಚಿವ ಜಗದೀಶ ಶೆಟ್ಟರ್ ಪ್ರತಿಕ್ರಿಯಿಸಿದ್ದಾರೆ. ಹಿಂದೆಯೂ ಸಹ ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳಾದವರು ಮತ್ತೆ ಮಂತ್ರಿ ಮಂಡಲ ಸೇರಿದ ಉದಾಹರಣೆಗಳಿವೆ ಎಂದಿದ್ದಾರೆ.
ಪ್ರವಾಹ ಪರಿಸ್ಥಿತಿ ಇಂದಾಗ ಧಾರವಾಡ ಸೇರಿದಂತೆ ಅನೇಕ ಕಡೆ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂದಿನಿಂದಲೇ ನಾನು ಕಾರ್ಯೋನ್ಮುನಾಗಿ ಜನರ ಸಮಸ್ಯೆಗೆ ಸ್ಪಂದಿಸುತ್ತೇನೆ. ಸರ್ಕಾರದಿಂದ ಸಕಲ ನೆರವು ನೀಡುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.