ಪ್ರಮುಖ ಸುದ್ದಿ

ಸನ್ನತಿಯಲ್ಲಿ ಶತಚಂಡಿ ಯಜ್ಞ ಸಂಪನ್ನ

ಪರಮೇಶ್ವರಿಯ ಸಂಪ್ರೀತಿಗಾಗಿ ಶತಚಂಡಿಯಾಗ- ಶೃಂಗೇರಿ ಮುರಲಿಧರ ಭಟ್

ಯಾದಗಿರಿ : ಚಿತ್ತಾಪೂರ ತಾಲೂಕಿನ ಸನ್ನತಿ ಶ್ರೀ ಚಂದ್ರಲಾಂಭ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಮಾಘ ಮಾಸದಲ್ಲಿ ನಡೆಸುವಂತೆ ಈ ವರ್ಷವೂ  ಶತಚಂಡಿ ಯಾಗ ಹಮ್ಮಿಕೊಳ್ಳಲಾಗಿತ್ತು. ಮಂಗಳವಾರ ಪಂಡಿತರ ವೇದಘೋಷಗಳೊಂದಿಗೆ ಪುರ್ಣಾಹುತಿಯೊಂದಿಗೆ ಯಾಗ ಸಂಪನ್ನಗೊಂಡಿತು.

ಲೋಕ ಕಲ್ಯಾಣ ಉದ್ದೇಶದಿಂದ ಈ ಭಾಗದ ಜಾಗೃತ ಕ್ಷೇತ್ರವಾದಿ ಶಕ್ತಿಪೀಠ ಸನ್ನತಿ ಚಂದ್ರಲಾ ಪರಮೇಶ್ವರದಲ್ಲಿ 16 ನೆಯ ವರ್ಷದ ಶತಚಂಡಿ ಯಾಗದಲ್ಲಿ ಭಾಗವಹಿಸಿದ ಶೃಂಗೇರಿಯ ಪಂ. ಮುರಲಿಧರ ಭಟ ಮಾತನಾಡಿ, ಯಜ್ಞಗಳ ಆಚರಣೆಯಿಂದ ಪರಮೇಶ್ವರಿಯ ಸಂಪ್ರೀತಿಗಾಗಿ ನಡೆಸುವ ಶತಚಂಡಿ ಯಾಗದ ಮೂಲಕ ಕಲುಷಿತಗೊಂಡ ಪರಿಸರ, ವಾತಾವರಣ ಜನಜೀವನ ನಿರ್ಮಲಗೊಳ್ಳುವುದು ಎಂದು ಹೆಳಿದರು.

ನಾವು ಬೆಳೆದ ದವಸ ದಾನ್ಯಗಳನ್ನು ಯಜ್ಞಗಳಿಗೆ ಅರ್ಪಿಸುವುದರಿಂದ ಬರುವ ದಿನಗಳಲ್ಲಿ ಉತ್ತಮ ಫಸಲು ಪಡೆಯಬಹುದು. ಇಂತಹ ಕಾರ್ಯಗಳಿಂದ ಧಾರ್ಮಿಕತೆ ಹೆಚ್ಚಾಗುವುದರ ಜೊತೆಗೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಅದಕ್ಕಾಗಿ ಜನರು ಇಂತಹ ಕಾರ್ಯಗಳಲ್ಲಿ ಭಾಗವಹಿಸಿ ಶ್ರೀದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ತಿಳಿಸಿದರು.

ನಂತರದಲ್ಲಿ ಕುಮಾರಿ ಸುವಾಸಿನಿಯರಿಗೆ ಸುವಾಸಿನಿ ಪೂಜೆ ನೆರವೇರಿಸಲಾಯಿತು. ಕಳೆದ ಮೂರು ದಿನಗಳಿಂದ ಸತತವಾಗಿ ಪಾರಯಣ ನಡೆಯಿತು.

ಕಾರ್ಯಕ್ರಮದಲ್ಲಿ ಲಿಂಗಾರೆಡ್ಡಿ ಬಾಸರೆಡ್ಡಿ ನಾಲ್ವಾರ, ಶಿವರಾಮ ನಾಡಗೌಡ ಹುರಸಗುಂಡಿಗಿ, ನಾರಾಯಣರಾವ ಅಣಬಿ, ಸುರೇಶರಾವ ಕುಲಕರ್ಣಿ ಕೊಲ್ಲುರು, ಸೀತಾರಾಮ ಭಟ್ ನಾಲ್ವಾರ, ರವೀಂದ್ರ ಕುಲಕರ್ಣಿ, ಗೋಪಾಲ ಕುಲಕರ್ಣಿ ಮಾಡಿಗಿ ಸೇರಿದಂತೆ ಅಪಾರ ಭಕ್ತರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button