ಪ್ರಮುಖ ಸುದ್ದಿ
ಎರಡು ಡೋಸ್ ಲಸಿಕೆ ಪಡೆಯುವವರೆಗಾದ್ರೂ ಎಚ್ಚರಿಕೆವಹಿಸಿ – ಸಚಿವ ಸುಧಾಕರ
ಕೊರೊನಾ ಪ್ರಕರಣ ಸಂಖ್ಯೆ ಇಳಿಕೆಃ ಆದರೆ ನಿರ್ಲಕ್ಷ ಬೇಡ
ಚಾಮರಾಜನಗರಃ ಲಾಕ್ ಡೌನ್ ಸಡಿಲಿಕೆಯಾಗಿದೆ ಎಂದು ಎಚ್ಚರತಪ್ಪಿ ಸಂಚರಿಸಬೇಡಿ. ಕೊರೊನಾ ನಿಯಮಗಳನ್ನು ಪಾಲನೆ ಮಾಡಿ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ ತಿಳಿಸಿದ್ದಾರೆ.
ಲಾಕ್ ಡೌನ್ ಸಡಿಲಿಕೆ ಕುರಿತು ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ಕನಿಷ್ಟ ಎರಡು ಡೋಸ್ ಲಸಿಕೆ ಪೂರ್ಣವಾಗುವವರೆಗಾದ್ರೂ ಎಚ್ಚರಿಕೆವಹಿಸಿ ಮೈ ಮರೆಯಬೇಡಿ ಕೊರೊನಾ ಪೂರ್ಣ ನಿರ್ಮೂಲನೆಯಾಗಿದೆ ಎಂದು ಭಾವಿಸಬೇಡಿ ಎಂದು ಅವರು ನಾಗರಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಕೊರೊನಾದಿಂದ ಸಾಕಷ್ಟು ಸಾವು ನೋವು ಅನುಭವಿಸಲಾಗಿದೆ. ಇಷ್ಟಾದರೂ ಎಚ್ಚರತಪ್ಪಿ ನಡೆದರೆ ಮುಂದೆ ಆಗುವ ಅನಾಹುತಕ್ಕೆ ಬಲಿಯಾಗಬೇಕಾಗುತ್ತದೆ.
ಕೊರೊನಾ ನಿರ್ಮೂಲನೆಗೆ ಜನರ ಸಹಕಾರ ಬಹುಮುಖ್ಯ. ಹೀಗಾಗಿ ಪ್ರತಿಯೊಬ್ಬರು ಕೊರೊನಾ ನಿಯಮಗಳನ್ನು ಬ್ರೇಕ್ ಮಾಡದೆ ಎಲ್ಲರೂ ಪಾಲನೆ ಮಾಡಿ ಎಂದು ಸಲಹೆ ನೀಡಿದರು.