ಪ್ರಮುಖ ಸುದ್ದಿ

ಮೋದಿ ಮುಸ್ಲಿಂರನ್ನೆಲ್ಲ ದೇಶ ಬಿಟ್ಟು ಹೊರ ಹಾಕ್ತಾರ..?

ಹಿಂದೂಸ್ಥಾನದಲ್ಲಿ ಹುಟ್ಟಿದವರೆಲ್ಲ ಹಿಂದೂಗಳೆ

ಧಾರವಾಡಃ ಬಿಜೆಪಿ ನಾಯಕರು ಯಾವಾಗಲು ಮುಸ್ಲಿಂರ ವಿರುದ್ಧ ಮಾತನಾಡುವುದೇಕೆ. ಜಾತಿ ಧರ್ಮದ ವಿರುದ್ಧ ಮಾತಾಡಿ ನಾಗರಿಕರ ಮಧ್ಯೆ ಗಲಾಟೆ ಹಚ್ಚಿ ಅದರ ಮೇಲೆ ತಮ್ಮ ಪಕ್ಷದ ಬೇಳೆ ಬೇಯಿಸಿಕೊಳ್ಳುವ ಉದ್ದೇಶವಾ..ಹಾಗಾದರೆ ದೇಶದಲ್ಲಿ ವಾಸಿಸುತ್ತಿರುವ ಮುಸ್ಲಿಂರೆನ್ನಲ್ಲ ದೇಶದಿಂದ ಹೊರ ಹಾಕ್ತಾರ ಈ ಮೋದಿ ಎಂದು ಗಣಿ ಸಚಿವ ವಿನಯ ಕುಲಕರ್ಣಿ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಮುಸ್ಲಿಂ ಸಮುದಾಯದವರನ್ನು ದೇಶ ಬಿಟ್ಟು ಹೊರ ಹಾಕ್ತಾರಾ..? ಅದು ಸಾಧ್ಯವಾ..? ಆರ್‍ಎಸ್‍ಎಸ್ ನವರು ಮಾತ್ರ ಹಿಂದೂಗಳಾ..? ಎಂದು ಪ್ರಶ್ನಿಸಿದ ಅವರು, ಹಿಂದೂಸ್ಥಾನದಲ್ಲಿ ವಾಸಿಸುವ ಎಲ್ಲರೂ ಹಿಂದೂಗಳೇ. ಇದನ್ನು ಬಿಜೆಪಿ ನಾಯಕರು ಅರ್ಥೈಸಿಕೊಳ್ಳಬೇಕು. ಜಾತಿ ಧರ್ಮದ ನಡುವೆ ಗೊಂದಲ ಉಂಟುಮಾಡಿ ಜಗಳ ಹಚ್ಚುವುದು ಅಲ್ಲ ಎಂದು ಪರೋಕ್ಷವಾಗಿ ಬಿಜೆಪಿ ನಾಯಕರ ಮೇಲೆ ಹರಿಹಾಯ್ದರು.

ಅಲ್ಲದೆ ಬಿಜೆಪಿ ಮಾಜಿ ರಾಜ್ಯಧ್ಯಕ್ಷ ಪ್ರಹ್ಲಾದ ಜೋಷಿ ನನ್ನ ವಿರುದ್ಧ ಸ್ಪರ್ಧಿಸಿ ಗೆಲ್ಲಲ್ಲಿ ಎಂದು ನೇರವಾಗಿ ಸವಾಲ್ ಎಸೆಸಿದ್ದಾರೆ.

Related Articles

One Comment

Leave a Reply

Your email address will not be published. Required fields are marked *

Back to top button