17 ವರ್ಷಗಳ ಬಳಿಕ ಭಾರತಕ್ಕೆ ವಿಶ್ವಸುಂದರಿ ಮುಕುಟ…!
ಹರಿಯಾಣ ಮೂಲದ ಮೆಡಿಕಲ್ ವಿದ್ಯಾರ್ಥಿನಿ ಮಾನುಷಿಗೆ ವಿಶ್ವಸುಂದರಿ ಮುಕುಟ
ಚೀನಾ: 17ವರ್ಷಗಳ ಬಳಿಕ ಭಾರತ ವಿಶ್ವ ಸುಂದರಿ ಮುಕುಟ ಮುಡಿಗೇರಿಸಿಕೊಂಡಿದೆ. ಹೌದು, ಹರಿಯಾಣ ಮೂಲದ ಚೆಲುವಿ ಮಾನುಷಿ ವಿಶ್ವ ಸುಂದರಿ ಸ್ಪರ್ದೆಯಲ್ಲಿ ಗೆದ್ದು 2017ರ ಭುವನ ಸುಂದರಿ ಪಟ್ಟಕ್ಕೇರಿದ್ದಾರೆ. 2000ನೇ ಇಸವಿಯಲ್ಲಿ ಭಾರತದ ಪ್ರಿಯಾಂಕಾ ಛೋಪ್ರಾ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದರು. ಆ ಬಳಿಕ ಭಾರತೀಯರಿಗೆ ವಿಶ್ವ ಸೌಂದರ್ಯ ಸ್ಪರ್ದೆಯಲ್ಲಿ ಕಿರೀಟ ಒಲಿದಿರಲಿಲ್ಲ. ಇಂದು ಹರಿಯಾಣದ ಭಗತ್ ಪೂಲ್ ಸಿಂಗ್ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿನಿ ಮಾನುಷಿ ಬ್ಯೂಟಿ ವಿತ್ ಎ ಪರ್ಪಸ್ ಪಟ್ಟವನ್ನು ತಮ್ಮದಾಗಿಸಿಕೊಂಡು ಬೀಗಿದ್ದಾರೆ.
ಇಂಗ್ಲೆಂಡಿನ ಸ್ಟೆಫಾನಿ ಹಿಲ್ ಮೊದಲ ರನ್ನರ್ ಅಪ್ ಆಗಿದ್ದರೆ ಮೆಕ್ಸಿಕೊ ದೇಶದ ಆಂಡ್ರಿಯಾ ಮೆಝಾ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ. ಸ್ಪರ್ದೆ ಸಂದರ್ಭದಲ್ಲಿ ಯಾವ ಜಾಬ್ ಮತ್ತು ಹೆಚ್ಚಿನ ಶಾಲರಿಗೆ ಇಷ್ಟಪಡುತ್ತೀರಿ ಮತ್ತು ಯಾಕೆ ಎಂದು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ನೂತನ ವಿಶ್ವಸುಂದರಿ ಮಾನುಷಿ ಸಂಬಳದ ಪ್ರಶ್ನೆಯೇ ಇಲ್ಲ. ಅತೀ ಹೆಚ್ಚು ಗೌರವ ಗಳಿಸುವವಳು ಅಮ್ಮ ಎಂದು ಉತ್ತರಿಸುವ ಮೂಲಕ ಭಾರತೀಯ ಸಂಸ್ಕೃತಿ ಮತ್ತು ಮಾತೃತ್ವವನ್ನು ಎತ್ತಿ ಹಿಡಿಯುವ ಮೂಲಕ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ ಎಂದು ತಿಳಿದುಬಂದಿದೆ.
ವಿಶ್ವ ಸುಂದರಿ ಸ್ಪರ್ದೆಯಲ್ಲಿ ವಿವಿಧ ದೇಶಗಳ ಒಟ್ಟು 108 ಚೆಲುವೆಯರು ಭಾಗವಹಿಸಿದ್ದರು. 20ವರ್ಷದ ಭಾರತದ ಹಾಲು ಬಣ್ಣದ ಮೋಹಕ ಸುಂದರಿ ಮಾನುಷಿ ಮಿಸ್ ವರ್ಲ್ಡ್ ಆಗಿ ಆಯ್ಕೆಯಾಗಿದ್ದಾರೆ. ಭಾರತಕ್ಕೆ 6 ನೇ ಬಾರಿಗೆ ವಿಶ್ವ ಸುಂದರಿ ಪಟ್ಟ ದೊರೆತಿದೆ. ಈ ಮೊದಲು 1966ರಲ್ಲಿ ರೀಟಾ ಫರಿಯಾ , 1994ರಲ್ಲಿ ಐಶ್ವರ್ಯ ರೈ, 1997ರಲ್ಲಿ ಡಯಾನಾ ಹೇಡನ್, 1999ರಲ್ಲಿ ಯುಕ್ತಾ ಮುಖಿ, 2000ರಲ್ಲಿ ಪ್ರಿಯಾಂಕ ಛೋಪ್ರಾ ವಿಶ್ವ ಸುಂದರಿಯರಾಗಿ ಮಿಂಚಿದ್ದರು.