ಜೋಗಜಲಪಾತಕ್ಕೆ ಇಳಿದಿದ್ದ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ನಾಪತ್ತೆ!
ಶಿವಮೊಗ್ಗ : ಜೋಗಜಲಪಾತಕ್ಕೆ ಇಳಿದಿದ್ದ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ನಾಪತ್ತೆ ಆಗಿದ್ದಾನೆ ಎಂದು ತಿಳಿದು ಬಂದಿದೆ. ಮಂಜುನಾಥ ಎಂಬ ವ್ಯಕ್ತಿ ಎರಡು ದಿನಗಳ ಹಿಂದಷ್ಟೇ ಜೋಗ ಜಲಪಾತಕ್ಕೆ ಬಿದ್ದು ಸಾವನ್ನಪ್ಪಿದ್ದರು. ಮಂಜುನಾಥ ಅವರ ಶವ ಮೇಲೆ ತರಲೆಂದು ಜ್ಯೋತಿರಾಜ್ ಚಿತ್ರದುರ್ಗದಿಂದ ಶಿವಮೊಗ್ಗ ಜೋಗ್ ಫಾಲ್ಸ್ ಗೆ ತೆರಳಿದ್ದರು.
ಇಂದು ಬೆಳಗ್ಗೆ ಮಂಜುನಾಥ ಅವರ ಶವ ಮೇಲೆ ತರಲೆಂದು ಜ್ಯೋತಿರಾಜ್ ಜೋಗಜಲಪಾತಕ್ಕೆ ಇಳಿದಿದ್ದರು. ಆದ್ರೆ, ರಾತ್ರಿ 9ಗಂಟೆ ಆದರೂ ಸಹ ಜ್ಯೋತಿರಾಜ್ ಮೇಲೆ ಬಂದಿಲ್ಲ. ಅಲ್ಲದೆ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಹೀಗಾಗಿ, ಆತಂಕ ಸೃಷ್ಠಿಯಾಗಿದ್ದು ಅಧಿಕಾರಿಗಳು ಜ್ಯೋತಿರಾಜ ಪತ್ತೆಗಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಜ್ಯೋತಿರಾಜ್ ಈ ಹಿಂದೆಯೂ ಸಲ ಅನೇಕ ಬಾರಿ ಜೋಗ್ ಫಾಲ್ಸ್ ಗೆ ಇಳಿದು ಶವಗಳನ್ನು ಮೇಲೆತ್ತಿದ್ದರು. ಅನೇಕ ಸಹಾಸಗಳ ಮೂಲಕ ರಾಜ್ಯದ ಮನೆ ಮಾತಾಗಿದ್ದರು. ಜ್ಯೋತಿರಾಜ್ ಜೀವನಗಾಥೆ ಆಧಾರಿತ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಸಿನೆಮಾದಲ್ಲಿ ಖುದ್ದು ನಾಯಕನಟನಾಗಿ ನಟಿಸಿ ಗಮನ ಸೆಳೆದಿದ್ದರು. ಸಾಹಸಿ ಜ್ಯೋತಿರಾಜ್ ಸುರಕ್ಷಿತವಾಗಿ ಹೊರಬರಲಿ ಎಂದು ವಿನಯವಾಣಿ ಟೀಮ್ ಆಶಿಸುತ್ತದೆ.