ಪಶು ವೈದ್ಯರಿಗೆ ತಾಂತ್ರಿಕತೆ ತಿಳುವಳಿಕೆ ಅಗತ್ಯ
ಪಶು ವೈದ್ಯರಿಗೆ ತಾಂತ್ರಿಕ ಸಮ್ಮೇಳನ
yadgiri, ಶಹಾಪುರಃ ಪಶು ವೈದ್ಯಾಧಿಕಾರಿಗಳು ಹಿಂದೆಂದಿಗಿಂತಲೂ ಪ್ರಸ್ತುತ ತಾಂತ್ರಿಕ ವಿಷಯಗಳಲ್ಲಿ ಅಭಿವೃದ್ಧಿ ಹೊಂದುವದು ಅಗತ್ಯವಿದೆ. ಪಶು ವೈದ್ಯರು ತಾಂತ್ರಿಕತೆ ಬಗ್ಗೆ ತಿಳುವಳಿಕೆ ಹೊಂದಬೇಕಿದೆ. ಆ ಕುರಿತು ಹೆಚ್ಚಿನ ಅಧ್ಯಯನ ಮಾಡಿ ಮನನ ಮಾಡಿಕೊಳ್ಳಬೇಕು ಎಂದು ಇಲಾಖೆಯ ಉಪ ನಿರ್ದೇಶಕ ಡಾ.ಶರಣಭೂಪಾಲರಡ್ಡಿ ಹೇಳಿದರು.
ತಾಲೂಕಿನ ದೋರನಹಳ್ಳಿ ಸಮೀಪದ ಪಶು ಸಂಗೋಪನಾ ಪಾಲಕಿಟೆಕ್ನಿಕ್ ಕಾಲೇಜಿನಲ್ಲಿ ಜಿಲ್ಲಾ ಪಂಚಾಯತ್ ವಿಸ್ತರಣಾ ಚಟುವಟಿಕೆಗಳಲ್ಲಿ ಜಿಲ್ಲೆಯ ಪಶುಪಾಲನಾ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆ ಅಧಿಕಾರಿಗಳಿಗಾಗಿ ಆಯೋಜಿಸಿದ್ದ ಒಂದು ದಿನದ ತಾಂತ್ರಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಕಾಲದಲ್ಲಿ ಕಂಡು ಬರದ ಲಿಂಪಿ ಚರ್ಮ ರೋಗ ಇದೀಗ ಸಾಂಕ್ರಮಿಕ ರೋಗವಾಗಿ ಹರಡಿದ್ದು, ಆ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಂಡು ಚಿಕಿತ್ಸೆ ನೀಡಬೇಕಿದೆ. ಲಿಂಪಿ ಚರ್ಮ ರೋಗದ ಬೆಳವಣಿಗೆ ಕುರಿತು ಸಮರ್ಪಕ ಅಧ್ಯಯನ ನಡೆಸಿ ಸುಕ್ತ ಚಿಕಿತ್ಸೆ ನೀಡಬೇಕು ಎಂದು ಸಲಹೆ ನೀಡಿದರು.
ತಾಂತ್ರಿಕ ಸಮ್ಮೇಳನದಲ್ಲಿ ಉಪನ್ಯಾಸಕರಾಗಿ ಬಾಗವಹಿಸಿದ್ದ ಕೆವಿಕೆ, ವಿಷಯ ತಜ್ಞರಾದ ಡಾ. ಮಂಜುನಾಥ ಪಾಟೀಲರು ಲಿಂಪಿ ಚರ್ಮ ರೋಗ ಕುರಿತು ಅದಕ್ಕೆ ಬೇಕಾದ ಚಿಕಿತ್ಸೆ ಬಗ್ಗೆ ಉಪನ್ಯಾಸ ನೀಡಿದರು. ಡಾ.ಕೊಟ್ರೇಶ ಪ್ರಸಾದ ಜಾನುವಾರು ಘಟಕಗಳ ಯೋಜನಾ ವರದಿ ತಯಾರಿಕೆ ಕುರಿತು ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಪಶುವೈದ್ಯರೊಂದಿಗೆ ಜಿಲ್ಲೆಯಲ್ಲಿ ಬೆಳೆಯಬಹುದಾದ ಸೂಕ್ತ ಮೇವಿನ ಬೆಳೆಗಳ ಕುರಿತು ಚರ್ಚಿಸಿ. ಸಂಶೋಧನಾ ಕೇಂದ್ರದ ಆವರಣದಲ್ಲಿ ಬೆಳೆದ ಎಲ್ಲ ಮೇವಿನ ಬೆಳೆಗಳನ್ನು ತೋರಿಸಿ ಮಾಹಿತಿ ನೀಡಲಾಯಿತು. ಪಶುಸಂಗೋಪನಾ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಡಾ|| ಚನ್ನಪ್ಪಗೌಡ ಬಿರಾದಾರ ನಿರೂಪಿಸಿದರು. ತಾಲೂಕು ಸಹಾಯಕ ನಿರ್ದೇಶಕÀ ಡಾ.ಷಣ್ಮುಖ ಗೊಂಗಡಿ ಹಾಗೂ ಜಿಲ್ಲೆಯ ಸುಮಾರು 20 ಪಶುವೈದ್ಯಾಧಿಕಾರಿಗಳು ಭಾಗವಹಿಸಿದ್ದರು.