ಲಾಕ್ ಡೌನ್ ಬಿಗಿಗೊಳಿಸಲು ಸೂಚಿಸಿದ ದರ್ಶನಾಪುರ
ಲಾಕ್ ಡೌನ್ ಬಿಗಿಗೊಳಿಸಲು ಸೂಚಿಸಿದ ದರ್ಶನಾಪುರ
ಶಹಾಪುರಃ ಇಂದು ನಗರ ಪ್ರದಕ್ಷಿಣೆ ಹಾಕಿದ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಮುಖ್ಯ ರಸ್ತೆ ಮೇಲೆ ಸರಾಗವಾಗಿ ಸಾಗುತ್ತಿರುವ ವಾಹನ ಸಂಚಾರ ನೋಡಿ ಎಲ್ಲೂ ಲಾಕ್ ಡೌನ್ ಪಾಲನೆ ಆಗುತ್ತಿಲ್ಲ ಎಂಬುದನ್ನು ಅರಿತ ಅವರು, ಕೂಡಲೆ ನಗರ ಪೊಲಿಸ್ ಅಧಿಕಾರಿಯೊಬ್ಬರಿಗೆ ಕಾಲ್ ಮಾಡಿ ಲಾಕ್ಡೌನ್
ಸರಳೀಕರಣ ಏಕೆ..? ಎಲ್ಲೂ ಪಾಲನೆ ಆಗುತ್ತಿಲ್ಲ ಜನ ಸಂದಣಿ ಕಾಣುತ್ತಿದೆ ಎಂದು ಪ್ರಶ್ನಿಸಿದರು ಎನ್ನಲಾಗಿದೆ.
ಇಂದು ಶುಕ್ರವಾರ ಸಂತೆ ಇರುವದರಿಂದ ರೈತಾಪಿ ಜನರು, ತರಕಾರಿ, ಹಣ್ಣು ಮಾರ್ಕೆಟಿಂಗ್ ಬರುತ್ತಿದ್ದಾರೆ ಎಂಬ ಸುದ್ದಿ ತಿಳಿದ ಅವರು, ಕೂಡಲೇ ಲಾಕ್ ಡೌನ್ ಬಿಗಿಗೊಳಿಸಲು ಸೂಚಿಸಿದರು ಎನ್ನಲಾಗಿದೆ.
ಬೆಳಗ್ಗೆ 06 ಗಂಟೆಯಿಂದ 12 ಗಂಟೆವರೆಗೂ ಮಾತ್ರ ದಿನಸಿ, ಹಣ್ಣು ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಿ 12 ,ಗಂಟೆ ನಂತರ ಈ ಎಲ್ಲವೂ ಬಂದ್ ಮಾಡಿಸಿ. ಕೊರೊನಾ ಸಮಸ್ಯೆಯ ಗಂಭೀರತೆ ಅರಿಯಬೇಕಿದೆ ಎಂದು ಸೂಚಿಸಿದರೆನ್ನಲಾಗಿದೆ.
ಹೀಗಾಗಿ ಪೊಲೀಸರು ಕಠಿಣ ಕ್ರಮಕೈಗೊಳ್ಳುತ್ತಿದ್ದು, ಸಾರ್ವಜನಿಕರು ಅರ್ಥೈಸಿಕೊಳ್ಳುವದು ಅಗತ್ಯವಿದೆ. ಕೊರೊನಾ ವಿರುದ್ಧ ಹಗಲಿರಳು ಶ್ರಮಿಸುತ್ತಿರುವ ಪೊಲೀಸ್, ವೈದ್ಯರು ಮತ್ತು ಕಾರ್ಮಿಕರ ಶ್ರಮ ಅರಿಯಬೇಕಿದೆ. ಜೀವದ ಹಂಗು ತೊರೆದು ಹಲವು ಇಲಾಖೆ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.
ಜನರು ದೇಶದ ಸ್ಥಿತಿಗತಿ ಅರಿಯಬೇಕು. ಕೊರೊನಾ ಸೋಂಕು ದಿನೆದಿನೇ ಹೆಚ್ಚಾಗುತ್ತಿದ್ದು, ಜನ ಜವಬ್ದಾರಿಯಿಂದ ವರ್ತಿಸದಿದ್ದರೆ ಮುಂದಿನ ಪರಿಣಾಮ ಊಹಿಸಲು ಅಸಾಧ್ಯ ಎಂದು ಯುವ ಉದ್ಯಮಿ ಗುರು ಮಣಿಕಂಠ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶಾಸಕರ ಸೂಚನೆ ಮೇರೆಗೆ ಪೊಲೀಸರು ಕ್ರಮಕೈಗೊಳ್ಳುವ ಮೊದಲೇ ಜನತೆ ಜವಬ್ದಾರಿ ಅರಿತು 12 ಗಂಟೆಯೊಳಗೆ ಅಂಗಡಿಗಳನ್ನು ಬಂದ್ ಮಾಡಬೇಕು. ಮನೆ ಬಿಟ್ಟು ಯಾರೊಬ್ಬರು ಹೊರಗಡೆ ಬರಬಾರದು ಎಂದು ಅವರು ಮನವಿ ಮಾಡಿದ್ದಾರೆ.