ಪ್ರಮುಖ ಸುದ್ದಿ
ಸಿಎಂ ಕುಮಾರಸ್ವಾಮಿ-ಡಿಕೆ ಶಿವಕುಮಾರ ಪ್ರತಿಕೃತಿ ದಹನ ಆಕ್ರೋಶ
ಯಾದಗಿರಿ: ಬಿಜೆಪಿ ಯಾವುದೇ ಆಪರೇಷನ್ ಕಮಲ ನಡೆಸತ್ತಿಲ್ಲ.
ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಒಳಜಗಳದಿಂದ ಸರಕಾರ ಶೀಘ್ರ ಪತನವಾಗಲಿದೆ ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ಹೇಳಿದರು.
ಸಿಎಂ ಎಚ್.ಡಿ.ಕುಮಾರಸ್ವಾಮಿ ನೀಡಿರುವ ದಂಗೆ ಹೇಳಿಕೆ ಖಂಡಿಸಿ ನಗರದಲ್ಲಿ ಬಿಜೆಪಿ ಹಮ್ಮಿಕೊಂಡ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರಿಗೆ ಅವರ ಶಾಸಕರ ಮೇಲೆ ವಿಶ್ವಾಸವಿಲ್ಲ ಹೀಗಾಗಿ ಭಯಪಡುತ್ತಿದ್ದಾರೆ ಎನಿಸುತ್ತಿದೆ.
ಮೈತ್ರಿ ಸರಕಾರ ಪತನವಾಗಲಿದೆ, ಸಿಎಂ ಕುಮಾರಸ್ವಾಮಿ ಹತಾಶೆಗೊಂಡು ದಂಗೆ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು.
ಡಿ.ಕೆ.ಶಿವಕುಮಾರ ಅವರನ್ನು ಬಿಜೆಪಿ ನಾಯಕರು ಟಾರ್ಗೆಟ್ ಮಾಡಿಲ್ಲ, ಶಿವಕುಮಾರ ತಪ್ಪು ಮಾಡದಿದ್ದರೆ ಭಯಪಡುವ ಅಗತ್ಯವಿಲ್ಲ, ತನಿಖೆ ಎದುರಿಸಲಿ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ಸುಭಾಷ್ ವೃತ್ತದಲ್ಲಿ ಟೈರಗೆ ಬೆಂಕಿ ಹಚ್ಚಿ ಸಿಎಂ ಕುಮಾರಸ್ವಾಮಿ ಹಾಗೂ ಸಚಿವ ಡಿ.ಕೆ.ಶಿವಕುಮಾರ ಭಾವ ಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶವ್ಯಕ್ತಪಡಿಸಲಾಯಿತು.