ಪ್ರಮುಖ ಸುದ್ದಿ

ಖಾಸಗಿ ಶಿಕ್ಷಣ ಸಂಸ್ಥೆಗಳ ಪರವಾಗಿ ಸದನದಲ್ಲಿ ಧ್ವನಿಯೆತ್ತಲು ಶಾಸಕರಿಗೆ ಮನವಿ

yadgiri, ಶಹಾಪುರ: ಕೋವಿಡ್-19 ವೈರಸ್ ಸೋಂಕು ಹಿನ್ನೆಲೆಯಲ್ಲಿ ಪ್ರಸ್ತುತ ರಾಜ್ಯ ಹಾಗೂ ಕೇಂದ್ರ ಸರ್ಕಾರ ಬೇರೆ ಬೇರೆ ಇಲಾಖೆಗಳ ಮೂಲಕ ಬೇರೆ ಬೇರೆ ಹಂತಗಳಲ್ಲಿ ಕೆಲಸ ಮಾಡುತ್ತಿರುವ ಶ್ರಮಿಕ ವರ್ಗಕ್ಕೆ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದು, ಆಪತ್ಕಾಲದಲ್ಲಿ ಅನುಕೂಲವಾಗಿದೆ, ಆದರೆ ಒಳ್ಳೆ ಸಮಾಜ ಉತ್ತಮ ನಾಗರಿಕರನ್ನು ನಿರ್ಮಾಣ ಮಾಡಲು ಪ್ರಯತ್ನ ಹಾಕುತ್ತಿರುವ ಖಾಸಗಿ ಶಾಲಾ ಶಿಕ್ಷಕ ವೃಂದ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಬಗ್ಗೆ ಕಾಳಜಿವಹಿಸುವುದನ್ನು ಸರ್ಕಾರ ಮರೆತಿದ್ದು ಸಂಕಷ್ಟಕ್ಕೀಡು ಮಾಡಿದೆ. ತಕ್ಷಣವೇ ಖಾಸಗಿ ಶಿಕ್ಷಣ ಸಂಸ್ಥೆಯ ಸಮಸ್ಯೆಗಳ ಪರಿಹಾರಕ್ಕೆ ಸದನದಲ್ಲಿ ಧ್ವನಿ ಎತ್ತಬೇಕು ಎಂದು ಖಾಸಗಿ ಶಾಲೆ ಒಕ್ಕೂಟದ ಅಧ್ಯಕ್ಷ ಆರ್.ಚನ್ನಬಸು ವನದುರ್ಗದ ನೇತೃತ್ವದ ನಿಯೋಗ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರ ಗೃಹ ಕಚೇರಿಗೆ ತೆರಳಿ ಮನವಿಯೊಂದನ್ನು ಸಲ್ಲಿಸಲಾಯಿತು.

ಖಾಸಗಿ ಶಿಕ್ಷಣ ಸಂಸ್ಥೆಗಳು ಅದರಲ್ಲಿ ಕನ್ನಡ ಮಾಧ್ಯಮ ಮತ್ತು ಇತರ ಮಾಧ್ಯಮ ಶಾಲೆ ನಡೆಸುತ್ತಿರುವವರು ತೊಂದರೆಯಲ್ಲಿದ್ದಾರೆ, ಅವರ ನೆರವಿಗೆ ಸಹಕರಿಸಬೇಕು ಸರ್ಕಾರದ ಗಮನ ಸೆಳೆಯಲು ಹೆಚ್ಚಿನ ಪ್ರಯತ್ನ ಹಾಕಬೇಕು ಎಂದರು.

ಪ್ರಧಾನ ಕಾರ್ಯದರ್ಶಿ ಅಶೋಕ ಘನಾತೆ ಬೇಡಿಕೆಗಳ ಮನವಿಯನ್ನು ಪ್ರಸ್ತುತಪಡಿಸಿದರು, 1995 ರ ನಂತರ ಪ್ರಾರಂಭವಾದ ಶಾಲೆಗಳಿಗೆ ಅನುದಾನ ಕಲ್ಪಿಸಬೇಕು. ಕೋವಿಡ್-19 ಸಂದರ್ಭದಲ್ಲಿ ಶಾಲಾ ಕಾರ್ಯ ಸ್ಥಗಿತಗೊಂಡಿದ್ದು ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ಮೂಲಕ ಆರ್ಥಿಕ ಸಹಕಾರ ನೀಡಬೇಕು. ಕಾಲ್ಪನಿಕ ವೇತನ ಬಡ್ತಿ ಜಾರಿ ಕುರಿತು ಕ್ರಮವಹಿಸುವುದು ಸೇರಿದಂತೆ ಶಿಕ್ಷಕರು ಮತ್ತು ಮಕ್ಕಳ ಅನುಪಾತದಲ್ಲಿ ಸಮತೋಲನ ಕಾಪಾಡುವುದು ಹಾಗೂ ಶಿಕ್ಷಣ ಸಂಸ್ಥೆಗಳ ಪುನರುತ್ಥಾನಕ್ಕೆ ಆರ್ಥಿಕ ಸಹಕಾರ ನೀಡಬೇಕು. ಸರ್ಕಾರದ ಶೈಕ್ಷಣಿಕ ಯೋಜನೆಗಳನ್ನು ಖಾಸಗಿ ಶಾಲೆಗಳಿಗೂ ತಲುಪುವಂತೆ ಮಾಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರಮುಖರಾದ ರಾಮಚಂದ್ರ ಸಗರ, ಮೂರ್ತಿ ಮುದ್ಗಲ್, ಮೃತ್ಯುಂಜಯ ಸ್ವಾಮಿ, ಹೊನ್ನಪ್ಪ ಗಂಗನಾಳ, ಮಲ್ಲಿಕಾರ್ಜುನ ಪಾಟೀಲ, ಭೀಮಣ್ಣಗೌಡ ಬಿರಾದಾರ, ಡಾ. ಫರಿದುದ್ದೀನ್, ಶರಣಗೌಡ ಗೋಗಿ, ತಿಪ್ಪಣ್ಣ ಕ್ಯಾತನಾಳ, ಸಿದ್ದರಾಮಪ್ಪ ಹುರಸಗುಂಡಿಗಿ, ದೀಪಕ್, ಚಂದ್ರಶೇಖರ, ಬಸವರಾಜ ಚಂದಾಪುರ, ಸುರೇಶ, ಶಿವಶಂಕರ ಹೇರುಂಡಿ ಇತರರಿದ್ದರು.

Related Articles

Leave a Reply

Your email address will not be published. Required fields are marked *

Back to top button