ಶಾಸಕ ರಾಜೂಗೌಡ ಜನ್ಮ ದಿನಾಚರಣೆ, ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
ಅಭಿಮಾನಿಗಳಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
ಯಾದಗಿರಿ: ಮಾಜಿ ಸಚಿವ, ಸುರಪುರ ಹಾಲಿ ಶಾಸಕ ನರಸಿಂಹನಾಯಕ (ರಾಜೂಗೌಡ) ಅವರ 40ನೇ ವರ್ಷದ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ನಗರದ ಸರ್ಕಾರಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು, ಹಾಲು ಬ್ರೆಡ್ ವಿತರಿಸುವ ಮೂಲಕ ಆಚರಿಸಿದರು.
ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ನೇತೃತ್ವದಲ್ಲಿ ಇಲ್ಲಿನ ಜಿಲ್ಲಾಸ್ಪತ್ರೆಗೆ ತೆರಳಿದ ಅಭಿಮಾನಿಗಳು, ಕಾರ್ಯಕರ್ತರು ರೋಗಿಗಳಿಗೆ ಹಣ್ಣು ಬ್ರೆಡ್ ಬಿಸ್ಕಿಟ್ ಗಳನ್ನು ಹಂಚಿ ಯುವಕರ ಕಣ್ಮಣಿಯಾಗಿರುವ ರಾಜೂಗೌಡ ಅವರಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅತಿಕಿರಿಯ ವಯಸ್ಸಿನ ಜನಪ್ರತಿನಿಧಿಯಾಗಿರುವ ಶಾಸಕ ರಾಜೂಗೌಡ ಅವರು, ಜನಪರ ಕಾಳಜಿಯ ಕ್ರಿಯಾಶೀಲತೆಯಿಂದಾಗಿ ಸುರಪುರ ಮತಕ್ಷೇತ್ರದ ಅಭಿವೃದ್ಧಿಗೆ ಕಾಣುತ್ತಿದೆ.
ಕಿರಿಯ ವಯಸ್ಸಿನಲ್ಲಿಯೇ ಸಚಿವರಾಗಿ ಅಪಾರ ಸೇವೆ ಸಲ್ಲಿಸಿದ್ದು, ರಾಜ್ಯದ ಜನತೆ ಮೆಚ್ಚುವಂತೆ ಆಡಳಿತ ನೀಡಿದ್ದರು. ಜನಸೇವೆಯನ್ನೇ ಜನಾರ್ಧನ ಸೇವೆ ಎಂದು ಕಾರ್ಯನಿರ್ವಹಿಸುತ್ತಿರುವ ಅವರಿಗೆ ಜಿಲ್ಲೆ ಮತ್ತು ಸುರಪುರ ಕ್ಷೇತ್ರಕ್ಕೆ ಹೆಚ್ಚಿನ ಸೇವೆ ಒದಗಿಸುವ ಶಕ್ತಿ ದೇವರು ಕರುಣಿಸಲಿ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|| ಸಂಜೀವಕುಮಾರ ರಾಯಚೂರಕರ್, ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ಸಿದ್ದಪ್ಪ ಕ್ಯಾಶಪನಳ್ಳಿ, ಸಾಹೇಬಗೌಡ ನಾಯಕ, ಭೀಮು ಬಸವಂತಪುರ, ಮಲ್ಲು ದೇವಕರ್, ಸೈದಪ್ಪ ಗೌಡಗೇರಾ, ದೀಪಕ, ಮಲ್ಲು ಹತ್ತಿಕುಣಿ, ರವಿ, ನಾಗು ವರ್ಕನಳ್ಳಿ, ಶಿವು ಬೀರನಾಳ, ಹಣಮಂತ ಬೀರನಾಳ, ಚಂದ್ರಾಮ ಗೌಡಗೇರಾ, ಸಯ್ಯದ್ ಚಾಮನಳ್ಳಿ, ಮಹೆಬೂಬ ಸೇರಿದಂತೆ ಅನೇಕ ಅಭಿಮಾನಿಗಳು ಇದ್ದರು.