ಪ್ರಮುಖ ಸುದ್ದಿ

ಕಿಡಿಗೇಡಿಗಳಿಗೆ ಪೊಲೀಸರು ತಕ್ಕ ಪಾಠ ಕಲಿಸಲಿ-ರಾಜೂಗೌಡ

ವಿಷ ನೀರು ಸೇವನೆ ಪ್ರಕರಣಃ 16 ಜನರಿಗೆ ಚಿಕಿತ್ಸೆ

ಯಾದಗಿರಿ, ಶಹಾಪುರ: ಮುದನೂರಿನ ಸಮೀಪದ ತೆಗ್ಗಳ್ಳಿ ಮತ್ತು ಶಖಾಪುರ ಗ್ರಾಮದಲ್ಲಿ ವಿಷಯುಕ್ತ ನೀರು ಸೇವಿಸಿ ಅಸ್ವಸ್ಥರಾದವರನ್ನು ಕೆಂಭಾವಿ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಇದುವರೆಗೆ ಒಟ್ಟು 16 ಜನರನ್ನು ಕೆಂಭಾವಿಯಿಂದ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕಿತ್ಸೆಗಾಗಿ ನುರಿತ ವೈದ್ಯರ ತಂಡ ನಿಯೋಜನೆಗೊಳಿಸಿದ್ದು, ಸಮರ್ಪಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರೂ ಗುಣಮುಖರಾಗಿದ್ದಾರೆ. ಅಸ್ವಸ್ಥಗೊಂಡವರ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ವೈದ್ಯರ ಶ್ರಮ ಫಲಕಾರಿಯಾಗಿದೆ. ಇಂದು ಸಂಜೆ ಅಥವಾ ಶನಿವಾರ ಬೆಳಗ್ಗೆ ಡಿಸ್ಚಾರ್ಜ್ ಮಾಡಲಾಗುವುದು ಎಂದು ತಾಲೂಕು ವೈದ್ಯಾಧಿಕಾರಿ ಡಾ.ರಮೇಶ ಗುತ್ತೇದಾರ ತಿಳಿಸಿದ್ದಾರೆ.

ಆಸ್ಪತ್ರೆಗೆ ಶಾಸಕರ ಭೇಟಿಃ ಆರೋಗ್ಯ ವಿಚಾರಣೆ

ವಿಷಯುಕ್ತ ನೀರು ಸೇವಿಸಿ ಮೂರು ದಿನಗಳಾಗಿದ್ದು, ತೆಗ್ಗಳ್ಳಿ ಮತ್ತು ಶಖಾಪುರ ಗ್ರಾಮದ ಹಲವರಿಗೆ ತಲೆ ಸುತ್ತುವುದು ವಾಂತಿಭೇದಿ ಪ್ರಕರಣ ಕಂಡು ಬಂದ ಪ್ರಯುಕ್ತ ಮುಂಜಾಗೃತ ಕ್ರಮವಾಗಿ ಶಹಾಪುರ ಆಸ್ಪತ್ರೆಗೆ 2 ಪುರುಷರು, 12 ಜನ ಮಹಿಳೆಯರು ಮತ್ತು ಇಬ್ಬರು ಬಾಲಕರನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಸೂಕ್ತ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಮತ್ತು ರಾಜೂಗೌಡ ತಿಳಿಸಿದರು.

ನಗರದ ಸರ್ಕಾರಿ ಆಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿದ ಶಾಸಕರಿಬ್ಬರು, ವಿಷಯುಕ್ತ ನೀರು ಸೇವನೆಯಿಂದ ಅಸ್ವಸ್ತಗೊಂಡು ದಾಖಲಾಗಿದ್ದ ಜನರನ್ನು ಮಾತನಾಡಿಸಿ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.

ವಿಷಯುಕ್ತ ನೀರು ನಲ್ಲಿ ಬರುತ್ತಿದೆ ಯಾರೊಬ್ಬರು ಸೇವಿಸಿ ಬೇಡಿ ಎಂದು ಪಂಚಾಯತ್ ನವರಿಗೆ ತಿಳಿಸುವ ಮೂಲಕ ಎಲ್ಲರಲ್ಲಿ ಜಾಗೃತಿ ಮೂಡಿಸುವ ಮುಖಾಂತರ ಸಮಯ ಪ್ರಜ್ಞೆ ಮೆರೆದ ತಾಐಇ ನಾಗಮ್ಮ ಮತ್ತು ಪುತ್ರ ಮೌನೇಶ ಅವರನ್ನು ಕಂಡು ಮಾತನಾಡಿ ಧೈರ್ಯ ತುಂಬಿದ ರಾಜೂಗೌಡ ಇಬ್ಬರನ್ನು ಪ್ರಶಂಸಿದರು.

ತಾಯಿ ಮಗನ ಸಮಯ ಪ್ರಜ್ಞೆಯಿಂದ ಇಂದು ನೂರಾರು ಜನರ ಜೀವ ಉಳಿದಿದೆ. ನೀಚ ಕೃತ್ಯ ಎಸಗಿದವರಿಗೆ ಶಿಕ್ಷೆಯಾಗಬೇಕಿದೆ. ಆ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕ್ರಮಕೈಗೊಳ್ಳಲಿದೆ. ಜೀವಜಲದಲ್ಲಿ ವಿಷ ಪ್ರಾಷಣ ಹಾಕಿದವರು ಮನುಷ್ಯ ಜಾತಿಯವರಲ್ಲ ಅವರು ರಾಕ್ಷಸ ವಂಶದವರು ಎಂದು ರಾಜೂಗೌಡ ಖಾರವಾಗಿ ಖಂಡಿಸಿದರು. ಯಾರು ಭಯಭೀತರಾಗಬೇಡಿ ಎಲ್ಲರೂ ಗುಣಮುಖರಾಗಿದ್ದಾರೆ ಎಂದರು. ಈ ಸಂದರ್ಭದಲ್ಲಿ ಡಾ.ರಮೇಶ ಗುತ್ತೇದಾರ, ಡಾ.ವೆಂಕಟೇಶ ಬೈರಾಮಡಗಿ ಸೇರಿದಂತೆ ಇತರರಿದ್ದರು.

Related Articles

Leave a Reply

Your email address will not be published. Required fields are marked *

Back to top button