ಪ್ರಮುಖ ಸುದ್ದಿವಿನಯ ವಿಶೇಷ

ಸತ್ಯಾಂಶ ತಿಳಿಯದೆ ಉಹಾಪೋಹ ಸುದ್ದಿ ಮಾಡಬೇಡಿ-ರಾಜೂಗೌಡ

ಸುಳ್ಳು ಸುದ್ದಿ ಪ್ರಕಟಣೆ- ನೋವು ತೋಡಿಕೊಂಡ ರಾಜೂಗೌಡ

ತಾಯಿಯ ಆರೈಕೆಯಲ್ಲಿ ತೊಡಗಿದ್ದ ರಾಜೂಗೌಡ 

ಮಲ್ಲಿಕಾರ್ಜುನ ಮುದನೂರ

ಯಾದಗಿರಿಃ ಕಳೆದ ಮೂರು ದಿನಗಳಿಂದ ಜಿಲ್ಲೆಯ ಸುರಪುರ ಶಾಸಕ ಹಾಗೂ ಬಿಜೆಪಿ ಎಸ್‍ಟಿ ಮೋರ್ಚಾ ರಾಜ್ಯಧ್ಯಕ್ಷ ರಾಜೂಗೌಡ (ನರಸಿಂಹ ನಾಯಕ) ಅವರು, ತಮ್ಮ ತಾಯಿಯವರ ಆರೋಗ್ಯ ಸರಿಯಿಲ್ಲದ ಕಾರಣ, ಅವರನ್ನು ಬೆಂಗಳೂರಿನ ಏರ್ ಪೋರ್ಟ್ ರಸ್ತೆಯಲ್ಲಿ ಬರುವ ಎಂಎಸ್‍ಐ ಆಶ್ರಯ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಗಾಗಿ ದಾಖಲಿಸಿದ್ದು, ಅವರನ್ನು ವಿಚಾರಿಸಿಕೊಳ್ಳುವಲ್ಲಿ ಕುಟುಂಬ ಸಮೇತ ಅಲ್ಲಿಯೇ ಇದ್ದು, ತಾಯಿಯವರ ಹಾರೈಕೆಯಲ್ಲಿ ಮಗ್ನರಾಗಿದ್ದಾರೆ.

ಆದರೆ ಇತ್ತ ಮಾಧ್ಯಮವೊಂದರಲ್ಲಿ ರಾಜೂಗೌಡ ಕಳೆದ ಮೂರು ದಿನಗಳಿಂದ ಕೈಗೆ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಉಹಾಪೋಹ ಸುದ್ದಿ ಹಬ್ಬಿಸಿದ್ದು, ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಬಿತ್ತರಿಸುವ ಮೂಲಕ ರಾಜೂಗೌಡರ ಮನಸ್ಸನ್ನು ಘಾಸಿಗೊಳಿಸಿದೆ.

ತಾಯಿಯವರ ಆರೈಕೆಯಲ್ಲಿ ತೊಡಗಿದ್ದ ಅವರು, ಇಂತಹ ಸ್ಥಿತಿಯಲ್ಲಿ ಮೊಬೈಲ್ ಬಳಕೆಯಿಂದ ಸಮಸ್ಯೆಯಾಗಲಿದೆ ಒತ್ತಡ ಬೀಳಲಿದೆ ಎಂಬ ಕಾರಣಕ್ಕೆ ಮೊಬೈಲ್ ಸ್ವಿಚ್ ಆಫ್ ಮಾಡಿದ್ದರು. ಇದನ್ನೆ ಕೆಲ ಮಾಧ್ಯಮಗಳು ಬಳಸಿಕೊಂಡು ಸುರಪುರ ಶಾಸಕ ರಾಜೂಗೌಡ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಹಾರಲಿದ್ದಾರೆ..? ಆಪರೇಷನ್ ಕಾಂಗ್ರೆಸ್‍ಗೆ ಒಳಗಾಗಿದ್ದಾರೆ ಎಂಬ ಉಹಾಪೋಹಾ ಸುದ್ದಿ ಪ್ರಕಟಿಸಿರುವ ಹಿನ್ನೆಲೆ ತೀವ್ರ ನೊಂದು ಕೊಂಡಿದ್ದು, ಅಲ್ಲದೆ ಸ್ವತಹಃ ತಾವೊಂದು ವಿಡಿಯೋ ಮಾಡಿ ಸತ್ಯಾಂಶವನ್ನು ತಿಳಿಸುವ ಮೂಲಕ ಮಾಧ್ಯಮದ ಸ್ನೇಹಿತರಲ್ಲಿ ಸೂಕ್ಷ್ಮ ಎಚ್ಚರಿಕೆಯನ್ನು ರಾಜೂಗೌಡ ಅವರು ನೀಡಿದ್ದಾರೆ.

ನನ್ನ ತಾಯಿಯ ಆರೋಗ್ಯ ವಿಚಾರಿಸಿಕೊಳ್ಳುವಲ್ಲಿ ನಾವೆಲ್ಲ ಬ್ಯುಸಿಯಾಗಿದ್ದು, ಕಳೆದ ಎರಡು ಮೂರು ದಿನದಿಂದ ನಮ್ಮ ತಾಯಿಯವರು ಐಸಿಯು ನಲ್ಲಿ ಇದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇವತ್ತು ಶನಿವಾರ ಒಂದಿಷ್ಟು ಆರಾಮವಾಗಿದ್ದು, ಮಾತನಾಡುತ್ತಿದ್ದಾರೆ, ಇಂತಹ ಸ್ಥಿತಿಯಲ್ಲಿ ನಾನಿದ್ದೀನಿ.

ಆದರೆ, ನಾನು ಸಂಪರ್ಕಕ್ಕೆ ಸಿಕ್ಕಿಲ್ಲ ಎನ್ನುವ ಒಂದೇ ಕಾರಣಕ್ಕೆ ಮಾಧ್ಯಮ ಏನೇನು ಹೇಳಿ ಗೊಂದಲ ಮೂಡಿಸುವದು ಸರಿಯಲ್ಲ ಎಂದು ತಿಳಿಸಿದ್ದಾರೆ.

ಅಲ್ಲದೆ ಬಿಜೆಪಿ ನನ್ನನ್ನು ಶಾಸಕನನ್ನಾಗಿ, ಸಚಿವರನ್ನಾಗಿ ಮಾಡಿದೆ. ರಾಜ್ಯ ನಾಯಕನನ್ನಾಗಿ ಗುರುತಿಸಿದೆ. ಮತ್ತು ಮೊನ್ನೆ ನಡೆದ ಸಂಸತ್ ಚುನಾವಣೆಯಲ್ಲಿ ನಮ್ಮ ಕ್ಷೇತ್ರದಿಂದ 26 ಸಾವಿರ ಲೀಡ್ ಕೊಟ್ಟಿದ್ದು, ಯಾವುದೇ ಪಕ್ಷ ಬಿಡುವ ಕಾರಣ ಬರುವದಿಲ್ಲ. ಪಕ್ಷ ನನ್ನನು ಬೆಳೆಸಿದೆ. ನಾನು ಬಿಜೆಪಿಯ ಪ್ರಾಮಾಣಿಕ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ.

ದಯವಿಟ್ಟು ಮಾಧ್ಯಮದಲಿ ಉಹಾಪೋಹ ಸುದ್ದಿ ಬಿತ್ತರಿಸಬೇಡಿ. ಸುಳ್ಳು ಸುದ್ದಿ ಪ್ರಕಟಿಸಿರುವದರಿಂದ ನನಗೆ ತುಂಬಾ ನೋವಾಗಿದ್ದು, ತಾಯಿಯವರ ಆರೋಗ್ಯ ಬೇಗ ಚೇತರಿಸಲಿ ಎಂಬ ಪ್ರಾರ್ಥನೆಯಲ್ಲಿ ನಾವಿರುವಾಗ, ನೀವುಗಳು ಯಾವುದೋ ಸುದ್ದಿ ಪ್ರಕಟಿಸಿ ಇನ್ನಷ್ಟು ನೋವು ಗೊಂದಲ ಮೂಡಿಸಬೇಡಿ ಎಂದು ಅವರು ವಿಡಿಯೋವೊಂದರಲ್ಲಿ ಮಾತನಾಡಿರುವದು ಈಗ ವೈರಲ್ ಆಗಿದೆ.

ಮಾಧ್ಯಮಗಳು ಬರಪೂರ ಸುದ್ದಿ ನೀಡುವ ಭರದಲ್ಲಿ ಇಂತಹ ಘಟನೆಗಳು ನಡೆಯುತ್ತವೆ. ಕಾರಣ ಮಾಧ್ಯಮ ಮಿತ್ರರಾದ ನಾವುಗಳು ಸುದ್ದಿ ಸೂಕ್ಷ್ಮತೆ ಅರಿತು ವರದಿ ಮಾಡಬೇಕಿದೆ. ರಾಜೂಗೌಡರು ತಮ್ಮ ತಾಯಿಯವರ ಆರೋಗ್ಯ ಸುಧಾರಿಸುವಲ್ಲಿ ನಿರತರಾಗಿರುವದು ಮಗನಾದ ಅವರ ಕರ್ತವ್ಯವನ್ನು ಅವರು ನಿಭಾಯಿಸುತ್ತಿದ್ದಾರೆ.
ರಾಜಕಾರಣಿಗಳಿಗೂ ತಂದೆ, ತಾಯಿ ಕುಟುಂಬ ವಿರುತ್ತದೆ. ಅವರ ರಕ್ಷಣೆ ನೋಡಿಕೊಳ್ಳುವದು ಅವರ ಜವಬ್ದಾರಿಯೂ ಆಗಿದೆ ಅಲ್ಲವೇ.?

ಶಾಸಕ ರಾಜೂಗೌಡರ ತಾಯಿ ಬೇಗ ಗುಣಮುಖರಾಗಲಿ..ಎಂಬುದು ವಿನಯವಾಣಿ ಪ್ರಾರ್ಥನೆ..

Related Articles

Leave a Reply

Your email address will not be published. Required fields are marked *

Back to top button