ಪ್ರಮುಖ ಸುದ್ದಿ
ಬುಡಬುಡಕಿ ಆಟ ಕಾಂಗ್ರೆಸ್ ಪಕ್ಷದಲ್ಲಿ ನಡೆಯೋದಿಲ್ಲ – ಶಾಸಕ ಶಾಮನೂರು ಕಿಡಿ
ದಾವಣಗೆರೆ : ಕಾಂಗ್ರೆಸ್ ಪಕ್ಷದಲ್ಲಿ ಒತ್ತಡ ತಂತ್ರಗಳು ಫಲಿಸುವುದಿಲ್ಲ. ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರ ಬುಡಬುಡಕಿ ಆಟ ಕಾಂಗ್ರೆಸ್ ಪಕ್ಷದಲ್ಲಿ ನಡೆಯೋದಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ಸಿನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಮಾಜಿ ಸಚಿವ ಎಂ.ಬಿ.ಪಾಟೀಲ್ ವಿರುದ್ಧ ಕಿಡಿಕಾರಿದ್ದಾರೆ.
ನಾನು ಸಚಿವ ಸ್ಥಾನದ ಹಿಂದೆ ಬಿದ್ದಿಲ್ಲ, ಶಾಸಕನಾಗಿಯೇ ಸಚಿವ ಸ್ಥಾನದ ಅಧಿಕಾರ ಬಳಸಿ ಮಾಡುವ ಅಭಿವೃದ್ಧಿಗಿಂತ ಹೆಚ್ಚಿನ ಅಭಿವೃದ್ಧಿಯನ್ನು ನನ್ನ ದಾವಣಗೆರೆ ಕ್ಷೇತ್ರದಲ್ಲಿ ಮಾಡುತ್ತೇನೆ ಎಂದು ದಾವಣಗೆರೆ ನಗರದಲ್ಲಿ ಮಾಜಿ ಸಚಿವ, ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.