ಹಿರೇಮಠ ಭಕ್ತರ ಆಶೋತ್ತರಕ್ಕೆ ಸ್ಪಂಧಿಸುವ ಮಠ – ಶಾಸಕ ತುನ್ನೂರ
ಶ್ರೀಮಠದ ಅಭಿವೃದ್ಧಿಗೆ ಶ್ರಮಿಸುವೆ - ಶಾಸಕ ತುನ್ನೂರ
ಹಿರೇಮಠ ಭಕ್ತರ ಆಶೋತ್ತರಕ್ಕೆ ಸ್ಪಂಧಿಸುವ ಮಠ
ಶ್ರೀಮಠದ ಅಭಿವೃದ್ಧಿಗೆ ಶ್ರಮಿಸುವೆ – ಶಾಸಕ ತುನ್ನೂರ
yadgiri, ಶಹಾಪುರಃ ಗ್ರಾಮದ ಹಿರೇಮಠದ ಹಿಂದಿನ ಪೀಠಾಧಿಪತಿಯಾಗಿದ್ದ ಶಿವಲಿಂಗೈಕೆ ವೀರಮಹಾಂತ ಶಿವಾಚಾರ್ಯರು ಸಮಾಜಮುಖ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಸಗರನಾಡಿನಾದ್ಯಂತ ಕೀರ್ತಿ ಹೆಚ್ಚಿಸುವ ಮೂಲಕ ಶ್ರೀಮಠದ ಅಭಿವೃದ್ಧಿ ಜತೆಗೆ ಭಕ್ತರ ಆಶೋತ್ತರಗಳಿಗೆ ಸ್ಪಂಧಿಸುವ ಮೂಲಕ ಮನೆ ಮಾತಾಗಿದ್ದರು ಎಂದು ಯಾದಗಿರಿ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ತಿಳಿಸಿದರು.
ತಾಲೂಕಿನ ದೋರನಹಳ್ಳಿ ಗ್ರಾಮದ ಹಿರೇಮಠಕ್ಕೆ ನೂತನ ಪೀಠಾಧಿಪತಿಯಾಗಿ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದಿಂದ ಆಗಮಿಸಿದ ಪೂಜ್ಯ ಮಡಿವಾಳ ದೇವರಿಗೆ ಶ್ರೀಮಠಕ್ಕೆ ಸ್ವಾಗತಿಸಿ ಸತ್ಕರಿಸಿ ಅವರಿಂದ ಆಶೀರ್ವಾದ ಪಡೆದುಕೊಂಡು ಮಾತನಾಡಿದರು.
ನೂತನ ಪೂಜ್ಯರ ಮಾರ್ಗದರ್ಶನದಲ್ಲಿ ಭಕ್ತರು ಸೇವೆ ಮಾಡುವ ಮೂಲಕ ಶ್ರೀಮಠದ ಕಾರ್ಯಗಳಿಗೆ ಸಹಕರಿಸಬೇಕು. ಧರ್ಮಜಾಗೃತಿಗಾಗಿ ಹಿಂದಿನ ವೀರಮಹಾಂತ ಶಿವಾಚಾರ್ಯರು ಹಗಲಿರುಳು ಶ್ರಮಿಸಿದ್ದರು. ಪ್ರಸ್ತುತ ಶ್ರೀಗಳು ಶ್ರೀಮಠದ ಪಾರಂಪರೆಯAತೆ ಮುಂದುವರೆಯಲಿದ್ದು, ಸದ್ಭಕ್ತರು ಸಾಥ್ ನೀಡಬೇಕಿದೆ. ಶ್ರೀಮಠಕ್ಕೆ ಹಿಂದಿನ ಶ್ರೀಗಳ ಕೊಡುಗೆ ಅಪಾರವಾಗಿದೆ ಎಂದು ಸ್ಮರಿಸಿದ ಅವರು, ಶ್ರೀಮಠದ ಸಮಾಜ ಮುಖಿ ಕಾರ್ಯಗಳಿಗೆ ಯಾವೊತ್ತು ಕೈಜೋಡಿಸುವೆ ಶ್ರೀಮಠ ಸತ್ಕಾರ್ಯಗಳಲ್ಲಿ ಸದಾ ಭಾಗಿಯಾಗುವದಲ್ಲದೆ ಎಂದಿನAತೆ ತನುಮನಧನದಿಂದ ಸೇವೆ ಸಲ್ಲಿಸುವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ತಿಪ್ಪಣ್ಣ ಸಾಹುಕಾರ ಆಂದೇಲಿ, ಮಾನಪ್ಪ ಹುಲಸೂರು, ಷಣ್ಮುಖಪ್ಪ ಕಕ್ಕೇರಿ, ಮಲ್ಲಣ್ಣ ಸುರಪುರ, ಭಾಗಣ್ಣ ಕೊಬ್ರಿ, ಬಸವರಾಜ ಮಲಗೊಂಡ, ವಿಜಯಕುಮಾರ ಮಲಗೊಂಡ, ತಾಯಮ್ಮ ತೆಗನೂರು, ಚಿನ್ನಪ್ಪ ನಿಲಂಕಾರ, ಅಬ್ದುಲ್ ಭಾಷಾ ಅರ್ಜಣಗಿ, ಹಳ್ಳೆಪ್ಪ ಹುಡೇದ, ಅಬ್ದುಲ್ ಕಲಾಲ್ ಇತರರಿದ್ದರು.