ಬಿಜೆಪಿಯಿಂದ ನನ್ನ ತೆಗೆದರೂ ಹಾನಿ ನನಗಿಲ್ಲ – ಯತ್ನಾಳ ಹೇಳಿಕೆ
ಬಿಎಸ್ ವೈ ಮುಗಿಸಲು ಇಬ್ಬರು ಸಂಸದರ ಯತ್ನ
ವಿವಿ ಡೆಸ್ಕ್ಃ ರಾಜ್ಯದ ಇಬ್ಬರು ಸಂಸದರು ಮುಖ್ಯಮಂತ್ರಿ ಯಡಿಯೂರಪ್ಪ ನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವ ಹುನ್ನಾರ ನಡೆದಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಯತ್ನಾಳ ಮಾಧ್ಯಮಕ್ಕೆ ಹೇಳಿಕೆ ನೀಡುವ ಮೂಲಕ ಮತ್ತೆ ಬಿಜೆಪಿಯಲ್ಲಿ ಗೊಂದಲ ಸೃಷ್ಟಿ ಮಾಡಿದ್ದಾರೆ ಎನ್ನಲಾಗಿದೆ.
ರಾಜ್ಯದ ಇಬ್ಬರು ಸಂಸದರು ನನ್ನ ಮತ್ತು ಯಡಿಯೂರಪ್ಪ ವಿರುದ್ಧ ಕುತಂತ್ರ ನಡೆಸುತ್ತಿದ್ದು, ಅದು ನಡೆಯುವದಿಲ್ಲ. ನೆರೆ ಪರಿಹಾರದ ವಿಷಯದಲ್ಲಿ ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗಿಸುವ ಕುತಂತ್ರ ನಡೆದಿರುವ ವಿಷಯ ನನ್ನ ಗಮನಕ್ಕೆ ಬಂದಿರುವ ಹಿನ್ನೆಲೆ ನಾನು ಪಕ್ಷದ ಹಿತ ದೃಷ್ಟಿಯಿಂದ ನೆರೆ ಪರಿಹಾರದಲ್ಲಿ ಜನರ ಸಂಕಷ್ಟ ನೋಡಿ ನಾನು ನನ್ನ ಭಾವನೆಯನ್ನು ಹೊರ ಹಾಕಿದ್ದೇನೆ.
ಕೆಲ ಸಂಸದರ ಹೇಳುವ ಛಾಡಿ ಮಾತನ್ನು ಕೇಳುವದು ಕೇಂದ್ರದ ನಾಯಕರು ನಿಲ್ಲಿಸಬೇಕು. ರಾಜ್ಯದ ಸ್ಥಿತಿ ಏನಿದೆ ಎಂಬುದನ್ನು ಅರಿಯಲಿ ಎಂದ ಅವರು, ಶಿಸ್ತು ಸಮಿತಿ ಕಳುಹಿಸಿದ ನೋಟಿಸ್ ಗೆ ಹೆದರಿ ನಾನೇನು ಬದಲಿ ಮಾತನಾಡಲ್ಲ. ಬೇಕಿದ್ದರೆ ನನ್ನನ್ನು ಬಿಜೆಪಿಯಿಂದ ತೆಗೆದು ಹಾಕಲಿ. ಬಿಜೆಪಿಯಿಂದ ತೆಗೆದರೆ ಹಾನಿ ನನಗಿಲ್ಲ ಎಂದು ಅವರು ಗುಡುಗಿದರು.