ಪ್ರಮುಖ ಸುದ್ದಿ
ಎಂಎಲ್ಸಿ ಚುನಾವಣೆಃ ಡಿ.10 ರಂದು ಮತದಾನ
ಶಹಾಪುರಃ 25 ಮತಗಟ್ಟೆ ಸಿದ್ಧತೆ, 532 ಜನ ಮತದಾರರು
yadgiri, ಶಹಾಪುರಃ ಕಲ್ಬುರ್ಗಿ-ಯಾದಗಿರಿ ಎಂಎಲ್ಸಿ ಚುನಾವಣೆ ಹಿನ್ನೆಲೆ ಇದೇ ಡಿ.10 ರಂದು ಮತದಾನ ನಡೆಯಲಿದ್ದು, ತಾಲೂಕಿನಲ್ಲಿ ಒಟ್ಟು 532 ಮತದಾರರಿದ್ದು, ಗಂಡು 257, ಹೆಣ್ಣು 275 ಜನ ಮತದಾನ ಮಾಡಲಿದ್ದಾರೆ ಎಂದು ತಹಶೀಲ್ದಾರ ಮಧುರಾಜ್ ಕೂಡ್ಲಿಗಿ ತಿಳಿಸಿದರು.
ವಡಿಗೇರಿ ಹೊರತು ಪಡಿಸಿ ತಾಲೂಕಿನಲ್ಲಿ ಒಟ್ಟು 24 ಗ್ರಾಮ ಪಂಚಾಯತಗಳಿದ್ದು, ಪ್ರತಿ ಪಂಚಾಯತಗೆ ಒಂದರಂತೆ ಮತಗಟ್ಟೆ ವ್ಯವಸ್ಥೆ ಮಾಡಲಾಗಿದೆ ಎಂದ ಅವರು, ನಗರಸಭೆ ಒಂದು ಮತಗಟ್ಟೆ ಸೇರಿದಂತೆ ಒಟ್ಟು 25 ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ವಾಹನ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಸೂಕ್ತ ಬಂದೋಬಸ್ತ್ ವ್ಯವಸ್ಥೆ ಸಹ ಕಲ್ಪಿಸಲಾಗಿದೆ ಎಂದು ಅವರು ವಿವರಿಸಿದರು.