ಪ್ರಮುಖ ಸುದ್ದಿ
ಹುಷಾರ್… ಜೇಬಿನಲ್ಲೇ ಬ್ಲಾಸ್ಟ್ ಆಗುತ್ತೆ ಮೊಬೈಲ್!
ಮೊಬೈಲ್ ಗಳು ಸ್ಪೋಟಗೊಳ್ಳುತ್ತಿರುವುದೇಕೆ?
ಕೊಪ್ಪಳ: ಮೊಬೈಲ್ ಪ್ರತಿಯೊಬ್ಬರು ಬಳಸುವ ಸಾಧನ. ಸದಾಕಾಲ ಜೊತೆಗಿರುವ ‘ಜೀವ’ ಮೊಬೈಲ್. ಆದರೆ, ಅದೇ ಮೊಬೈಲ್ ಜೀವದ ಜೊತೆ ಚಲ್ಲಾಟ ಆಡುತ್ತಿದೆ. ಹೌದು, ಇತ್ತೀಚೆಗೆ ಮೊಬೈಲ್ ಸ್ಫೋಟಗೊಳ್ಳುತ್ತಿರುವ ಘಟನೆಗಳು ಹೆಚ್ಚಾಗಿವೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಸಿದ್ದಾಪುರ ಗ್ರಾಮದ ಹನುಮೇಶ ಎಂಬುವವರ ಜೇಬಿನಲ್ಲೇ ಮೊಬೈಲ್ ಸ್ಪೋಟಗೊಂಡಿದೆ. ಪರಿಣಾಮ ಪ್ಯಾಂಟ್ ಬಟ್ಟೆ ಸುಟ್ಟಿದ್ದು ಎಡಗಾಲಿನ ತೊಡೆ ಭಾಗದಲ್ಲಿ ಗಂಭೀರ ಗಾಯವಾಗಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಹನುಮೇಶ ಚಿಕಿತ್ಸೆ ಪಡೆದಿದ್ದಾರೆ. ಮೊಬೈಲ್ ಸ್ಪೋಟದ ಸುದ್ದಿ ವೈರಲ್ ಆಗಿದ್ದು ಜನರನ್ನು ಬೆಚ್ಚಿಬೀಳಿಸಿದೆ.
ಜೇಬಿನಲ್ಲಿಟ್ಟುಕೊಂಡಿದ್ದ ಎಂ ಐ ಮೊಬೈಲ್ ಏಕಾಏಕಿ ಬ್ಲಾಸ್ಟ್ ಆಗಿದ್ದು ಘಟನೆ ನಡೆದಿದೆ ಎಂದು ಹನುಮೇಶ ಆರೋಪಿಸಿದ್ದಾರೆ. ಆದರೆ, ಏಕಾಏಕಿ ಮೊಬೈಲ್ ಸ್ಪೋಟಕ್ಕೆ ಕಾರಣವೇನು ಎಂಬುದನ್ನು ತಗ್ನರು ಪತ್ತೆ ಹಚ್ಚುವ ಮೂಲಕ ಹೆಚ್ಚಿನ ಅನಾಹುತಗಳಾಗದಂತೆ ತಡೆಯಬೇಕಿದೆ. ಅಲ್ಲಿವರೆಗೆ ಮೊಬೈಲ್ ಬಳಕೆದಾರರು ಎಚ್ಚರವಾಗಿರುವುದು ಒಳಿತು.