ಪ್ರಮುಖ ಸುದ್ದಿ
ಕಲಬುರಗಿ : ನಗರದ ಆರು ಅಂಗಡಿಗಳಿಗೆ ಕಳ್ಳರ ಕನ್ನ!
ಕಲಬುರಗಿ : ನಗರದ ಹೊರವಲಯದ ಆಳಂದ ಚೆಕ್‌ಪೋಸ್ಟ್ ಬಳಿ ಸರಣಿ ಕಳ್ಳತನ ನಡೆದಿದೆ. ನಿನ್ನೆ ತಡರಾತ್ರಿ ಸಮಯದಲ್ಲಿ ಬೇಕರಿ, ಮೆಡಿಕಲ್, ಮೊಬೈಲ್ ಅಂಗಡಿ ಸೇರಿದಂತೆ ಆರು ಅಂಗಡಿಗಳ ಶೆಟರ್ ಮುರಿದು ಕಳ್ಳತನ ಮಾಡಿದ ಕಳ್ಳರು ಎಸ್ಕೇಪ್ ಆಗಿದ್ದಾರೆ.
ನಗದು ಸೇರಿದಂತೆ ಹಲವು ವಸ್ತುಗಳನ್ನು ಕದ್ದು ಕಳ್ಳರು ಪರಾರಿ ಆಗಿದ್ದಾರೆ. ಕಲಬುರಗಿ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.