ಪ್ರಮುಖ ಸುದ್ದಿವಿನಯ ವಿಶೇಷ

ಮೋದಿ ಸಾಹಸ : ಡಿಸ್ಕವರಿ ಚಾನಲ್ ನಲ್ಲಿ ಸ್ಪೇಶಲ್ ಎಪಿಸೋಡ್!

ವಿನಯ ಮುದನೂರ್

ಪ್ರಧಾನಿ ನರೇಂದ್ರ ಮೋದಿ ಯೋಗಭ್ಯಾಸ ಈಗಾಗಲೇ ವಿಶ್ವಾದ್ಯಂತ ಸದ್ದು ಮಾಡಿದೆ. ಮೋದಿ ನೀಡಿದ ಫಿಟ್ ನೆಸ್ ಚಾಲೆಂಜ್ ಸಹ ಭಾರೀ ಸುದ್ದಿಯಾಗಿದ್ದು ಸಹ ಮರೆಯುವಂತಿಲ್ಲ. ಆದರೆ, ಇದೀಗ ಪ್ರಧಾನಿ ಮೋದಿ ತಮ್ಮ ಸಾಹಸ ಪ್ರವೃತ್ತಿಯ ಮೂಲಕ ಡಿಸ್ಕವರಿ ವಾಹಿನಿಯ ಫೇಮಸ್ ಶೋನಲ್ಲಿ ಮಿಂಚಲಿದ್ದಾರೆ ಎಂಬ ವಿಷಯ ವಿಶ್ವವೇ ಭಾರತದ ಪ್ರಧಾನಿಯತ್ತ ತಿರುಗುವಂತೆ ಮಾಡಿದೆ.

ಹೌದು, ಸಾಹಸಕ್ಕೆ ಹೆಸರಾದ ಡಿಸ್ಕವರಿ ಚಾನಲ್ ನಲ್ಲಿ ಪ್ರಸಾರ ಆಗುವ ಖ್ಯಾತ ನಿರೂಪಕ ಬಿಯರ್ ಗ್ರಿಲ್ಸ್ ಜೊತೆಗೆ ಉತ್ತರಖಂಡ್ ನ ಅರಣ್ಯದಲ್ಲಿ ಪ್ರಧಾನಿ ಮೋದಿ ರೌಂಡ್ಸ್ ಮಾಡಿದ್ದಾರೆ. ದೋಣಿಯಲ್ಲಿ ಸಂಚರಿಸಿದ್ದಾರೆ, ವೆಪನ್ ಸಹ ಖುದ್ದಾಗಿ ರೆಡಿ ಮಾಡಿದ್ದಾರಲ್ಲದೆ ಯುವಕರೇ ನಾಚುವಂತೆ ಇತರೆ ಸಾಹಸಗಳನ್ನು ಮಾಡಿದ್ದಾರೆ. ಇವೆಲ್ಲಾ ಡಿಸ್ಕವರಿ ಚಾನಲ್ ನ ಫೇಮಸ್ ಶೋ ‘ಮ್ಯಾನ್ ವರ್ಸಸ್ ವೈಲ್ಡ್’ ಎಪಿಸೋಡ್ ನ ಪ್ರಮೋದಲ್ಲಿ ಕಾಣಿಸಿಕೊಂಡ ದೃಶ್ಯಾವಳಿಗಳೀಗ ಜಗತ್ತಿನ ಗಮನಸೆಳೆದಿದೆ.

ಮ್ಯಾನ್ ವರ್ಸಸ್ ವೈಲ್ಡ್ ನ ಎಪಿಸೋಡ್ ನ ಪ್ರೋಮೋವನ್ನು ಕಾರ್ಯಕ್ರಮ ನಿರೂಪಕ ಗ್ರಿಲ್ಸ್ ಟ್ಚೀಟರ್ ನಲ್ಲಿ ಶೇರ್ ಮಾಡಿದ್ದಾರೆ. ಪ್ರಾಣಿ ರಕ್ಷಣೆ, ಪರಿಸರ ಜಾಗೃತಿ ಕುರಿತು ಅರಿವು ಮೂಡಿಸಲು ಮೋದಿ ಕಾಡಿನಲ್ಲಿ ಸುತ್ತಾಡಿದ್ದಾರೆ. ಮೋದಿ ಸಾಹಸದ ಸ್ಪೇಷಲ್ ಸ್ಟೋರಿ ಭಾರೀ ಕುತೂಹಲ ಮೂಡಿಸಿದೆ. ಇದೇ ಆಗಷ್ಟ್ 12 ರಂದು ರಾತ್ರಿ 09 ಗಂಟೆಗೆ ಡಿಸ್ಕವರಿ ವಾಹಿನಿಯಲ್ಲಿ ಸ್ಪೇಷಲ್ ಅಡ್ವೆಂಚರ್‌ ಎಪಿಸೋಡ್ ಪ್ರಸಾರವಾಗಲಿದ್ದು ವೀಕ್ಷಿಸಲು ವಿಶ್ವಾದ್ಯಂತ ಕೋಟ್ಯಾಂತರ ಜನ ಕಾದು ಕುಳಿತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button