ಲಾಕ್ ಡೌನ್ ಹೋಗಿದೆ ಆದರೆ ವೈರಸ್ ಹೋಗಿಲ್ಲ ಎಚ್ಚರಿಕೆವಹಿಸಿಃ ಮೋದಿ
ಕೊರೊನಾ ಕುರಿತು ಮೋದಿ ಮಾತು
ವಿವಿ ಡೆಸ್ಕ್ಃ ಜನರು ಕರ್ಫ್ಯೂದಿಂದ ಇಲ್ಲಿವರೆಗೆ ಕಷ್ಟದಲ್ಲಿದ್ದಾರೆ. ಕೊರೊನಾ ವಿರುದ್ಧ ಜನ ಹೋರಾಟ ಮುಂದುವರೆದಿದೆ. ಜನ ತಮ್ಮ ಜವಬ್ದಾರಿ ನಿಭಾಯಿಸಲು ಹೊರ ಬರುತ್ತಿದ್ದಾರೆ. ನಿಜ ಆದರೆ ನೆನಪಿರಲಿ ಲಾಕ್ ಡೌನ್ ಹೋಗಿದೆ ಆದರೆ ವೈರಸ್ ಹೋಗಿಲ್ಲ ಎಂದು ಪ್ರಧಾನ ನರೇಂದ್ರ ಮೋದಿ ಇಂದು ಸರಿಯಾಗಿ 6 ಗಂಟೆಗೆ ದೇಶದ ನಾಗರಿಕರನ್ನು ಉದ್ದೇಶಿಸಿ ಮಾತು ಆರಂಭಿಸಿದರು.
ಚಳಿಗಾಲ ಆರಂಭ ವೈರಸ್ ಹರಡುವಿಕೆ ಜಾಸ್ತಿಯಾಗುತ್ತದೆ. ಹಬ್ಬ ಹರಿದಿನಗಳಲ್ಲಿ ಜನ ಓಡಾಟ ಹೆಚ್ಚಾಗುತ್ತಿದೆ. ಆದರೆ ವೈರಸ್ ಇರುವದನ್ನು ಮೈ ಮರೆಯಬೇಡಿ. ಮಾಸ್ಕ್ ಧರಿಸುವದನ್ನು ಬಿಡಬೇಡಿ. ಎಚ್ಚರಿಕೆ ಅಗತ್ಯ ವಿದೆ.
ಲಸಿಕೆ ಬರೋವವರೆಗೂ ಎಚ್ಚರಿಕೆ ಅಗತ್ಯ ವಿದೆ. ದೇಶದ ವಿಜ್ಞಾನಿಗಳಿಂದ ಜೀವಪಣಕ್ಕಿಟ್ಟು ಸಂಶೋಧನೆ ನಡೆಸುತ್ತಿದ್ದಾರೆ. ಲಸಿಕೆ ಬಂದ ತಕ್ಷಣ ಪ್ರತಿಯೊಬ್ಬರಿಗೂ ತಲುಪಿಸುವ ವ್ಯವಸ್ಥೆ ಮಾಡಲಾಗುವದು.
ದೇಶದಲ್ಲಿ 10 ಲಕ್ಷ ಕೊರೋನಾ ತಗುಲಿದ ರೋಗಿಗಳಲ್ಲಿ 83 ಜನರು ಸಾವನ್ನಪ್ಪುತ್ತಿದ್ದಾರೆ. ದೇಶದ ಸುರಕ್ಷತೆ, ನಿಮ್ಮೆಲ್ಲರ ರಕ್ಷಣೆ ಮುಖ್ಯವಾಗಿದೆ. ಆರೋಗ್ಯವಾಗಿದ್ದು ಎಲ್ಲರೂ ದೇಶವನ್ನು ಮುನ್ನಡೆಸಬೇಕಿದೆ. ದೇಶದಲ್ಲಿ 90 ಲಕ್ಷ ಬೆಡ್ ವ್ಯವಸ್ಥೆ ಮಾಡಲಾಗಿದೆ. ಚಿಕಿತ್ಸೆಗೆ ಬೇಕಾದ ವ್ಯವಸ್ಥೆ ಮಾಡಲಾಗಿದೆ.
ಮುಂದುವರೆದ ದೇಶಗಳಿಗಿಂತ ನಮ್ಮ ದೇಶದಲ್ಲಿ ಗುಣಮುಖರಾಗುತ್ತಿರುವ ಸಂಖ್ಯೆ ಅಧಿಕವಿದೆ. ಕೊರೊನಾ ಇನ್ನು ಹೆಚ್ಚಾಗುವ ಸಂಭವ ವಿದೆ. ರಿಕವರಿ ಚನ್ನಾಗಿದೆ. ಹಾಗಂತ ನಾವು ಮೈಮರೆಯುವಂತಿಲ್ಲ. ಬೇಕಾಬಿಟ್ಟಿ ಓಡಾಡಬೇಡಿ. ಎಚ್ಚರಿಕೆವಹಿಸಿ ಮಾಸ್ಕ್ ಧರಿಸಿ ಆರೋಗ್ಯ ಇಲಾಖೆ ನೀಡಿದ ನಿಯಮಗಳನ್ನು ಚಾಚು ತಪ್ಪದೆ ಪಾಲಿಸಿ.
ಮುಂದೆ ಹಬ್ಬಗಳು ಸಾಲು ಸಾಲು ಇವೆ. ಆಚರಿಸುವ ಸಂಭ್ರಮದಲ್ಲಿ ಕಂಟಕ ತಂದುಕೊಳ್ಳಬೇಡಿ. ಮುಂಜಾಗೃತವಹಿಸಿ ಸರಳವಾಗಿ ಆಚರಿಸಿ. ಆತಂಕ ಬೇಡ. ಆದಷ್ಟು ಬೇಗನೆ ಲಸಿಕೆ ಬರಲಿ ಎಂದು ಆಶಯ ವ್ಯಕ್ತಪಡಿಸಲಾಗುತ್ತಿದೆ.
ಮೂರು ನಮುನೆಯಲ್ಲಿ ಸಂಶೋಧನೆ ಮುಂದುವರೆದಿದ್ದು, ಲಸಿಕೆ ಬಂದ ತಕ್ಷಣವೇ ಪ್ರತಿಯೊಬ್ಬರಿಗೂ ಲಸಿಕೆ ತಲುಪಿಸುವ ವ್ಯವಸ್ಥೆ ಮಾಡಲಾಗುವದು. ಅಲ್ಲಿವರೆಗೂ ಎಲ್ಲರೂ ಜಾಗೃತರಾಗಿ ನಡೆಯಬೇಕು ಎಂದು ಹಬ್ಬದ ಶುಭಾಯಗಳೊಂದಿಗೆ ಮಾತಿಗೆ ಇತಿಶ್ರೀ ಹಾಡಿದರು.