ಜನಮನಪ್ರಮುಖ ಸುದ್ದಿ

ಯೋಗ ಅಭ್ಯಾಸ ಮಾಡಿ ಕೊರೊನಾ ನಿಯಂತ್ರಿಸಿ – ಮೋದಿ ಮಾತು

ಮೋದಿ‌ ಮನ್ ಕಿ‌ ಬಾತ್ ಕೊರೊನಾ ವಿರುದ್ಧ ಹೊರಾಟ ಪ್ರಶಂಸೆ

ನಮ್ಮ ದೇಶದಲ್ಲಿ ಬೇರೆ ದೇಶಗಳಂತೆ ಕೊರೊನಾ ವೇಗವಾಗಿ ಹರಡಿಲ್ಲ. ಕೊರೊನಾದ ವಿರುದ್ಧ ನಮ್ಮ ದೇಶದ ಜನ ಒಗ್ಹಟ್ಟು ಪ್ರದರ್ಶಿಸಿದ್ದಾರೆ. ಕೊರೊನಾ ಸಮಸ್ಯೆ ನಿಭಾಯಿಸುವಲ್ಲಿ ದೇಶದ ಜನರ ಸಹಕಾರ ಮೆಚ್ಚುವಂತದ್ದು, ವಿವಿಧ ಸಂಘ ಸಂಸ್ಥೆಗಳು‌ ಸೇವೆಯಲ್ಲಿ ತೊಡಗಿಸಿಕೊಂಡಿರುವದು ಮಾದರಿ ಎನಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್ ನಲ್ಲಿ ತಮ್ಮ ಆಶಯವನ್ನು ವ್ಯಕ್ತಪಡಿಸಿದರು.

ಮುಂದುವರೆದು ಮಾತನಾಡಿದ ಅವರು, ಸೆಲೂನ್ ನಡೆಸುತ್ತಿರುವ ಓರ್ವ ಮೋಹನ್ ಎಂಬುವದು ಬಡವರಿಗೆ ಸಹಾಯ ಹಸ್ತ ನೀಡಿದ್ದಾರೆ.

ದೇಶದಾದ್ಯಂತ ಜನರ ಪ್ರತಿಕ್ರಿಯೆ ಸಕರಾತ್ಮಕವಾಗಿದೆ.
ಶ್ರಮಿಕ ರೈಲು ಈಗಾಗಲೇ ಓಡಾಡುತ್ತಿದೆ. ನಾವೆಲ್ಲ ಇಂದು ಕಾಣುತ್ತಿರುವದು ಎದುರಿಸುತ್ತಿರುವ ಸಮಸ್ಯೆ ನಮಗೆಲ್ಲ ಪಾಠವಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಗೌತಮದಾಸ್ ಎಂಬುವರು 100 ಕುಟುಂಬಗಳಿಗೆ ರೇಷನ್ ನೀಡುತ್ತಿದ್ದಾರೆ.

ಈ ಮೂಲಕ ತಮ್ಮ ಸೇವೆಯನ್ನು ಅರ್ಪಿಸಿದ್ದಾರೆ.
ಮನೆಯದ ಯಾರೊಬ್ಬರ ಅನಗತ್ಯ‌ ಹೊರಗಡೆ ಬರಬೇಡಿ. ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಿ. ಆಯುಷ್‌ ಮಂತ್ರಾಲಯ ಸೂಚಿಸಿದ ಯೋಗ ಅಭ್ಯಾಸ ಮಾಡಿ.‌ಪ್ರಾಣಾಯಮ, ಕಪಾಳಬಾತಿ ಸೇರಿದಂತೆ ವಿವಿಧ ಯೋಗಾಸನಗಳನ್ನು ನಿತ್ಯ ರೂಢಿಸಿಕೊಳ್ಳುವ ಮೂಲಕ ಆರೋಗ್ಯವನ್ನು ವೃದ್ಧಿ ಸಿಕೊಳ್ಳಿ ಎಂದು ಸಲಹೆ ನೀಡಿದರು.

ಕೊರಿನಾ ವಿರುದ್ಧ ಯೊಗಾಸ್ತ್ರ‌ ಅತ್ಯಂತ ಉಪಯುಕ್ತವಾಗಿದೆ.‌ ಆಯುರ್ವೇದ ಮತ್ತು ಯೋಗದಿಂದ ಮಾನಸಿಕವಾಗಿ ಸದೃಢವಾಗಿರಬಹುದು. ಉಸಿರಾಟದ ಸಮಸ್ಯೆಗೆ ಯೋಗದ ಅನುಲೋಮ ವಿಲೋಮ ಅನುಸರಿಸಿ ಇದು ಪರಿಣಾಮಕಾರಿಯಾಗಿ ಕೆಲಸ‌ ಮಾಡಲಿದೆ.

ಯೋಗದಲ್ಲಿ ಹಲವು ಪ್ರಾಣಾಯಾಮ ಗಳಿವೆ. ವೈರಸ್ ನಮ್ಮ ಉಸಿರಾಟದ ಮೇಲೆ ಪರಿಣಾಮ ಬೀರಲಿದ್ದು ಅದರ‌ ನಿಯಂತ್ರಣಕ್ಕೆ ಯೋಗ ಪ್ರಾಣಾಯಾಮ ಮಾಡುವದನ್ನು ರೂಢಿಸಿಕೊಳ್ಳಿ. ಕಮ್ಯುನಿಟಿ, ಇಮ್ಯುನಿಟಿ ಮತ್ತು‌ ಯೂನಿಟಿ ಯನ್ನು ಯೋಗ ಒದಗಿಸಲಿದೆ. ಆಯುಷ್ಮಾನ್ ಯೋಜನೆ ದೇಶದ 1 ಕೋಟಿ ಜನರು ಈಗಾಗಲೇ ಆರೋಗ್ಯ‌ ಸುಧಾರಿಸಿಕೊಳ್ಳಲು ಸದುಪಯೋಗ ಪಡೆದಿದ್ದಾರೆ.

ಜಲ ಇದ್ರೆ ಜೀವನ, ಜಲ‌ ಇದ್ರೆ ನಾಳೆ ಎಂಬುದು ಇದೆ ಎಂಬುದನ್ನು ಅರಿತು ನೀರಿನ ಸಂರಕ್ಷಣೆ ಮಾಡಬೇಕಿದೆ. ನಿಯಮಿತ ಬಳಕೆ, ಪ್ರಕೃತಿಯ ಸೇವೆಯೊಂದಿಗೆ ನಾವೆಲ್ಲ ಬದುಕಬೇಕು. ಪಕ್ಷಿಗಳಿಗೆ ನೀರಿಲ್ಲದೆ ಪರದಾಡುತ್ತಿವೆ. ಅವಕ್ಕೆಲ್ಲ‌ ನೀರಿನ ವ್ಯವಸ್ಥೆ ಮಾಡುವದನ್ನು‌ ಮರೆಯಬೇಡಿ. ಮಳೆ ನೀರು ಸಂಗ್ರಹಕ್ಕೆ ಒತ್ತು ನೀಡಬೇಕಿದೆ ಎಂದರು.

ಪರಿಸ್ಥಿತಿ ಅವಲೊಕನಕ್ಕಾಗಿ ಒಡಿಶಾ, ಪಶ್ಚಿಮ ಬಂಗಾಲಕ್ಕೆ ನಾನು ಭೇಟಿ ನೀಡಿದೆ.‌ ಕೊರೊನಾ ಜೊತೆಗೆ ನಾವೆಲ್ಲ ಬದುಕು‌ ಕಟ್ಟಿಕೊಳ್ಳೋಣ. ದೇಶದ ಜನರ ಸೇವಾ ಮನೋಭಾವ ಇರುವದರಿಂದಲೇ ನಾವು ಕೊರೊನಾ‌ ವಿರುದ್ಧ ಹೋರಾಡಲು ಸಾಧ್ಯವಾಗಿದೆ. ಆರ್ಥಿಕ ‌ಅಭಿವೃದ್ಧಿಗೆ ಎಲ್ಲಾ‌ ಸಹಕಾರವನ್ನು‌ ನೀಡುವಂಥ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಕೊರೊನಾ‌ ವಾರಿಯರ್ಸ್ ಸೇವಾ ಕಾರ್ಯಕ್ಕೆ‌ ಧನ್ಯವಾದಗಳನ್ನು ಅರ್ಪಿಸಿದ ಅವರು, ಬಡವರಿಗೆ ಅಗತ್ಯ ಆಹಾರ ಧಾನ್ಯ ಒದಗಿಸುವ‌‌ ಕೆಲಸ ಸರ್ಕಾರ ಮಾಡಲಿದೆ. ಪೂರ್ವ ಭಾರತ‌ ಪ್ರದೇಶದ ಅಭಿವೃದ್ಧಿಯಾಗುತ್ತಿದ್ದು, ಅದಕ್ಕೆ‌ ಇನ್ನಷ್ಟು ಒತ್ತು‌ ನೀಡಲಾಗಿದೆ ಎಂದರು.

ವಲಸೆ ಕಾರ್ಮಿಕರಿಗೆ ತೊಂದರೆಯಾಗಿದೆ. ಆದರೆ‌ ಲಕ್ಷಾಂತರ ಕಾರ್ಮಿಕರನ್ನು‌ ನಾವೆಲ್ಲ‌ ಅವರ ಸ್ವಗ್ರಾಮಕ್ಕೆ ತಲುಪಿಸುವ ಕಾರ್ಯ‌ ಮಾಡಲಾಗಿದೆ. ಕೊರೊನಾ ವಿರುದ್ದ ನಿಯಮಗಳನ್ನು ಪಾಲಿಸಿ‌ ಆತಂಕ ಬೇಡ.‌ ಮಾಸ್ಕ್, ಸ್ಯಾನಿಟೈಸರ್, ಅಂತರ‌ ಇವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button